BengaluruCrime

ಪ್ರವೀಣ್‌ ಹತ್ಯೆ ಪ್ರಕರಣ; ಈವರೆಗೆ 15 ಮಂದಿ ವಶಕ್ಕೆ – ಆರಗ ಜ್ಞಾನೇಂದ್ರ

ಬೆಂಗಳೂರು; ಹಿಂದೂ ಪರ ಸಂಘಟನೆ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇದುವರೆಗೆ 15 ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಅನೇಕ ಮತಾಂಧ ಸಂಘಟನೆಗಳ ಮೇಲೆ ನಮಗೆ ಅನುಮಾನವಿದೆ. ಈ ಬಗ್ಗೆ ಬಿರುಸಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಕೇರಳದಿಂದ ಬಂದು ಕೊಲೆ ಮಾಡಲಾಗಿದೆ ಎಂಬ ಅನುಮಾನವಿದೆ. ಹೀಗಾಗಿ ಹಂತಕದ ಬಂಧನಕ್ಕೆ ಕೇರಳ ಪೊಲೀಸರ ನೆರವು ಕೋರಿದ್ದೇವೆ. ಜಂಟಿ ಕಾರ್ಯಾಚರಣೆಯಿಂದ ಹಂತಕರನ್ನು ಮಟ್ಟ ಹಾಕಲು ಸಾಧ್ಯವಾಗುತ್ತೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಜೆಪಿಯಲ್ಲಿ ನಮ್ಮ ಕಾರ್ಯಕರ್ತರೇ ದೊಡ್ಡ ಆಸ್ತಿ. ಆಕ್ರೋಶ ಇದ್ದಿದ್ದಕ್ಕೆ ಕಾರ್ಯಕರ್ತರು ರಾಜೀನಾಮೆ ನೀಡ್ತಿದ್ದಾರೆ. ಆದ್ರೆ ಯಾರೂ ಸಿದ್ಧಾಂತವನ್ನು ಬಿಡುತ್ತಿಲ್ಲ. ನಾವು ಎಲ್ಲಾ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿದ್ದೇವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡುತ್ತೇವೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

Share Post