BengaluruPolitics

ಆರ್‌ಆರ್‌ ನಗರದಲ್ಲಿ ಮುನಿರತ್ನ ವಿರುದ್ಧ ಪೋಸ್ಟರ್‌

ಬೆಂಗಳೂರು; ರಾಜರಾಜೇಶ್ವರಿ ನಗರದಲ್ಲಿ ರಾಜಕೀಯ ಜೋರಾಗಿದೆ. ಆರ್‌ಆರ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳನ್ನು ಓವರ್‌ ಲಿಸ್ಟ್‌ನಿಂದ ಡಿಲೀಟ್‌ ಮಾಡಲಾಗಿದೆ ಎಂದು ಕಾಂಗ್ರೆಸ್‌ ಸಂಶದ ಡಿ.ಕೆ.ಸುರೇಶ್‌ ಆರೋಪ ಮಾಡಿದ್ದರು. ಈ ಸಂಬಂಧ ನಿನ್ನೆ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದ್ದರು. 

ಇದೀಗ ಕಾಂಗ್ರೆಸ್‌ ಪೋಸ್ಟರ್‌ ಅಭಿಯಾನ ಶುರು ಮಾಡಿದೆ. ಸ್ಥಳೀಯ ಶಾಸಕ ಹಾಗೂ ಸಚಿವ ಮುನಿರತ್ನ ಅವರನ್ನು ಪ್ರಶ್ನೆ ಮಾಡುವ ಪೋಸ್ಟರ್‌ಗಳನ್ನು ಕ್ಷೇತ್ರದಲ್ಲಿ ಅಂಟಿಸಲಾಗಿದೆ. ರಾತ್ರಿ ವೇಳೆ ಅಲ್ಲಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಆರ್‌. ಆರ್‌ ನಗರ ಕ್ಷೇತ್ರದಲ್ಲಿ 75 ಸಾವಿರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಜೊತೆಗೆ ಒಂದು ಲಕ್ಷಕ್ಕೂ ಹೆಚ್ಚು ಮತದಾರರನ್ನು ಅಕ್ರಮವಾಗಿ ಸೇರಿಸಲಾಗಿದೆ ಏಂದೂ ಆರೋಪಿಸಲಾಗಿದೆ.

ಈ ನಡುವೆ ಆರ್‌ಆರ್‌ ನಗರದಲ್ಲಿ ಮುನಿರತ್ನ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

 

Share Post