CinemaCrime

ನನ್ನನ್ನೂ ಪ್ರೀತಿಸಿ ಮದುವೆಯಾಗಿದ್ದ, ಪವಿತ್ರಾ ಜೊತೆ ಸಂಬಂಧ ಇಟ್ಟುಕೊಂಡಿದ್ದ; ಚಂದು ಬಗ್ಗೆ ಪತ್ನಿ ಮಾತು

ಹೈದರಾಬಾದ್‌; ಮೊನ್ನೆಯಷ್ಟೇ ಅಪಘಾತವೊಂದರಲ್ಲಿ ಕಿರುತೆರೆ ನಟಿ ಪವಿತ್ರಾ ಸಾವನ್ನಪ್ಪಿದ್ದರು.. ಇದೀಗ ಅವರ ಸ್ನೇಹಿತ ಹಾಗೂ ನಟ ಚಂದ್ರಕಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಚಂದ್ರಕಾಂತ್‌ ಹಾಗೂ ಪವಿತ್ರಾ ವಿವಾಹೇತರ ಸಂಬಂಧ ಹೊಂದಿದ್ದರು.. ಈ ಹಿನ್ನೆಲೆಯಲ್ಲಿ ಚಂದ್ರಕಾಂತ್‌ ಅಲಿಯಾಸ್‌ ಚಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಅಂದಹಾಗೆ ಚಂದುಗೆ ಈ ಮೊದಲೇ ಮುದುವೆಯಾಗಿತ್ತು.. ಅದೂ ಕೂಡಾ ಪ್ರೇಮ ವಿವಾಹ.. ಮೊದಲ ಪತ್ನಿ ಶಿಲ್ಪಾ ಅವರು ಚಂದು ಸಾವಿನ ಬಗ್ಗೆ ಹಾಗೂ ಅವರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ..

ನನಗೆ ಚಂದು 2004ರಲ್ಲಿ ಪರಿಚಯವಾಗಿದ್ದರು.. ಮನೆಯವರು ನಮ್ಮ ಮದುವೆಗೆ ಮೊದಲು ಒಪ್ಪಿರಲಿಲ್ಲ.. ನಂತರ ಡಿಮ್ಯಾಂಡ್‌ ಮಾಡಿ ನಾವು ಮದುವೆಯಾಗಿದ್ದೆವು.. ನಮಗೆ 8 ವರ್ಷದ ಮಗಳು, 4 ವರ್ಷ ಮಗ ಇದ್ದಾನೆ.. ಆದ್ರೆ ಐದು ವರ್ಷದಿಂದ ನಮ್ಮ ನಡುವಿನ ಸಂಬಂಧ ಸರಿಯಿರಲಿಲ್ಲ.. ಲಾಕ್‌ಡೌನ್‌ ಆದ ಮೇಲೆ ಚಂದು ಹಾಗೂ ಪವಿತ್ರ ನಡುವೆ ರಿಲೇಷನ್‌ಶಿಪ್‌ ಶುರುವಾಗಿತ್ತು.. ಪವಿತ್ರ ಜೊತೆ ಸಂಬಂದ ಇಟ್ಟುಕೊಂಡು ಮೇಲೆ ನನ್ನ ಮೇಲೆ ಚಂದು ದೌರ್ಜನ್ಯ ಮಾಡಲು ಶುರು ಮಾಡಿದ್ದ ಎಂದು ಪತ್ನಿ ಶಿಲ್ಪಾ ಹೇಳಿಕೊಂಡಿದ್ದಾರೆ..

ಯಾವಾಗಲೂ ನನ್ನನ್ನು ನಿಂದಿಸುತ್ತಿದ್ದರು. ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು.. ಆದರೂ ನಾನು ನನ್ನ ಗಂಡನೇ ಸರ್ವಸ್ವ ಎಂದು ಬದುಕಿದ್ದೆ.. ಆದ್ರೆ ಆತ ನನ್ನನ್ನು ಇವತ್ತು ಬಿಟ್ಟು ಹೋಗಿದ್ದಾನೆ ಎಂದು ಶಿಲ್ಪಾ ಅಸಮಾಧಾನ ವ್ಯಕ್ತಪಡಿಸಿದ್ದಾಳೆ…

 

Share Post