BengaluruCrime

ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಪ್ರಿಯಕರ, ಆತನ ಗೆಳೆಯ ಅತ್ಯಾಚಾರ..?

ಬೆಂಗಳೂರು; ಪ್ರಿಯಕರನನ್ನು ನಂಬಿಕೊಂಡು ತುಮಕೂರಿನಿಂದ ಬೆಂಗಳೂರಿಗೆ ಬಂದಿದ್ದ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ, ಪ್ರಿಯಕರ ಹಾಗೂ ಆತನ ಸ್ನೇಹಿತನಿಂದ ಅತ್ಯಾಚಾರಕ್ಕೊಳಗಾಗಿದ್ದಾಳೆ. ಗಿರಿನಗರದ ಮನೆಗೆ ಕರೆದುಕೊಂಡು ಹೋದ ಪ್ರಿಯಕರ ಆಕೆ ಮೇಲೆ ಅತ್ಯಾಚಾರ ಎಸಗಿದ್ದು, ಸ್ನೇಹಿತನನ್ನೂ ಕರೆಸಿಕೊಂಡು ಆತನಿಗೂ ಪ್ರಿಯತಮೆಯನ್ನು ಹಂಚಿದ್ದಾನೆ.

ಘಟನೆ ಸಂಬಂಧ ಪೊಲೀಸರು ಪುರುಷೋತ್ತಮ್‌ ಹಾಗೂ ಚೇತನ್‌ ಎಂಬುವವರನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರಯವನಾದ ಪುರುಷೋತ್ತಮ್‌ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತುಮಕೂರಿನ ನಿವಾಸಿ ಪ್ಯಾರಾಮೆಡಿಕಲ್‌ ಓದುತ್ತಿರುವ ಯುವತಿಯನ್ನು ಆತ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಒಂದು ವಾರದ ಹಿಂದೆ ಆಕೆಯನ್ನು ಭೇಟಿಯಾಗಲೆಂದೇ ಪುರುಷೋತ್ತಮ್‌ ತುಮಕೂರಿಗೆ ಹೋಗಿದ್ದ. ಪ್ರಿಯತಮೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಆತ, ಬರುವಾಗ ಆಕೆಯ ಮೊಬೈಲ್‌ ತೆಗೆದುಕೊಂಡುಬಂದಿದ್ದ. ಹೀಗಾಗಿ ಆಕೆ ಎರಡು ದಿನಗಳ ಹಿಂದೆ ಪುರುಷೋತ್ತಮ್‌ಗೆ ಕರೆ ಮಾಡಿ ಮೊಬೈಲ್‌ ಕೊಡುವಂತೆ ಒತ್ತಾಯಿಸಿದ್ದಾಳೆ. ಆಗ ಆತ ಬೆಂಗಳೂರು ಮೆಜೆಸ್ಟಿಕ್‌ಗೆ ಬರುವಂತೆ ಹೇಳಿದ್ದಾನೆ.

ಪ್ರಿಯಕರ ಹೇಳಿದಂತೆ ವಿದ್ಯಾರ್ಥಿನಿ ಮೆಜೆಸ್ಟಿಕ್‌ಗೆ ಬಂದು ಕರೆ ಮಾಡಿದ್ದಾಳೆ. ಅಲ್ಲಿಗೆ ಬಂದ ಆರೋಪಿ ಪುರುಷೋತ್ತಮ್‌ ಆಕೆಯನ್ನು ಗಿರಿನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಲವಂತವಾಗಿ ಆತ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅನಂತರ ಸ್ನೇಹಿತ ಚೇತನ್‌ನನ್ನು ಕೂಡಾ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಇಬ್ಬರೂ ಸೇರಿ ಆಕೆಯ ಮೇಲೆ ಮತ್ತೊಮ್ಮೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಯುವತಿ ಚೀರಾಡಿದ್ದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

Share Post