Bengaluru

ತುಮಕೂರ ರಸ್ತೆಯ ಮೇಲ್ಸೇತುವೆ ದುರಸ್ಥಿ ವಿಳಂಬಕ್ಕೆ ಆಕ್ರೋಶ

ಬೆಂಗಳೂರು : ಕಳೆದ ಡಿಸೆಂಬರ್‌ 25ರಂದು ತುಮಕೂರು ರೆಸ್ತೆಯ ಮೇಲ್ಸೇತುವೆಯನ್ನು ದುರಸ್ಥಿ ಕಾರಣದಿಂದ ಮುಚ್ಚಲಾಗಿತ್ತು. ಒಂದು ವಾರದ ಮಟ್ಟಿಗೆ ಮುಚ್ಚಲಿದ್ದೇವೆ ಎಂದು ಹೇಳಿದ್ದರು. ಆದರೆ ಈಗ ತಿಂಗಳು ಕಳೆದರೂ ದುರಸ್ಥಿ ಕಾಮಗಾರಿ ಕೆಲಸ ಇನ್ನು ಮುಗಿದಿಲ್ಲ. ಇದರಿಂದ ದಸರಹಳ್ಳಿ ಶಾಸಕ ಮುಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಮಂಜುನಾಥ್‌ ಅವರು ಈ ದುರಸ್ಥಿ ಕಾಮಗಾರಿ ವಿಳಂಬದ ಕುರಿತು ರಾಷ್ಟ್ರೀಯ ಹೆದ್ದಾರೆ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗೆ ಪತ್ರ ಬರೆದಿದ್ದಾರೆ. 102 ಮತ್ತು 103ನೇ ಕಂಬಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಕಾರಣಕ್ಕೆ ಮೇಲ್ಸೇತುವೆ ಮುಚ್ಚಲಾಗಿದೆ. ಒಂದು ವಾರದಲ್ಲಿ ಕಾಮಗಾರಿ ಮುಗಿಸುವೆವು ಎಂದು ಮುಚ್ಚಲಾಗಿದೆ. ಆದರೆ ಈಗ ತಿಂಗಳು ಕಳೆದಿದೆ ಎಂದು ಶಾಸಕರು ಕಿಡಿ ಕಾರಿದ್ದಾರೆ.

ರಾಜ್ಯದ ಸುಮಾರು 22 ಜಿಲ್ಲೆಗಳು ಮತ್ತು ನೆರೆಯ ರಾಜ್ಯಗಳ ವಿವಿದೆಢೆಯಿಂದ ಬರುವ ಸುಮಾರು ಎರಡು ಲಕ್ಷ ವಾಹನಗಳಿಗೆ ಇದರಿಂದ ತೊಂದರೆ ಆಗ್ತಿದೆ. ಇದರಿಂದ ಎಲ್ಲಾ ವಾಹನಗಳು ಸರ್ವೀಸ್‌ ರಸ್ತೆಯಲ್ಲಿ ಸಂಚರಿಸುತ್ತಿವೆ. ರೋಗಿಗಳು, ಆಂಬುಲೆನ್ಸ್‌ಗಳು ಸುಗಮವಾಗಿ ಓಡಾಡಲು ಆಗುತ್ತಿಲ್ಲ ಎಂದು ಶಾಸಕ ಮಂಜುನಾಥ್‌ ಅವರು ಪತ್ರ ಬರೆದಿದ್ದಾರೆ.

Share Post