ಮಗುವಿನ ಫೋಟೋ ಹಂಚಿಕೊಂಡ ನಟಿ ಪ್ರಣೀತಾ; ಜಾಲತಾಣಗಳಲ್ಲಿ ವೈರಲ್
ಬೆಂಗಳೂರು; ಬಹುಭಾಷಾ ನಟಿ ಪ್ರಣೀತಾ ಸುಭಾಷ್, ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಜೂನ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ತಮ್ಮ ಮಗುವಿನ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಪ್ರಣೀತಾ ಅವರು ಉದ್ಯಮಿ ನಿತಿನ್ ರಾಜು ಅವರನ್ನು ಮದುವೆಯಾದ ಮೇಲೆ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಹೆಣ್ಣು ಮಗುವಿನ ಜನಿಸಿದ ಬಳಿಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮಗುವಿನ ಬಗ್ಗೆ ಹೇಳಿಕೊಂಡಿದ್ದರು.