ಸಚಿವರ ಒತ್ತಡಕ್ಕೆ ಮಣಿದು ಕಸದ ಘಟಕ ಸ್ಥಗಿತಗೊಳಿಸಲು ಆದೇಶ
ಬೆಂಗಳೂರು: ನಗರದಲ್ಲಿ ಉತ್ಪತ್ತಿಿಯಾಗುವ ತ್ಯಾಾಜ್ಯವನ್ನು ಭೂ ಭರ್ತಿ ಕೇಂದ್ರಗಳಿಗೆ ಕಳುಹಿಸುವುದನ್ನು ಕಡಿಮೆ ಮಾಡಲು 7 ಸಂಸ್ಕರಣಾ ಘಟಕ ಸ್ಥಾಾಪಿಸಲಾಗಿದೆ. ಆದರೆ, ಇದೀಗ ಆ ಘಟಕಗಳನ್ನು ಮುಚ್ಚುವ ಕುರಿತಂತೆ ಸ್ಥಳೀಯ ಶಾಸಕರು ಮುಖ್ಯಮಂತ್ರಿಿಗಳ ಮೇಲೆ ಒತ್ತಡ ಹೇರಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಾಯಾಧೀಕರಣ ಸೂಚನೆ, ತ್ಯಾಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸುವ ಸಲುವಾಗಿ 7 ತ್ಯಾಾಜ್ಯ ಸಂಸ್ಕರಣಾ ಘಟಕ ಸ್ಥಾಾಪಿಸಲಾಗಿದೆ. ಅದರಲ್ಲಿ ಸದ್ಯ 5 ಘಟಕಗಳು ಕಾರ್ಯನಿರ್ವಹಿಸುತ್ತಿಿದ್ದು, ಉಳಿದ ಎರಡು ಘಟಕಗಳು ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿವೆ. ಹೀಗೆ ಕಾರ್ಯನಿರ್ವಹಿಸುತ್ತಿಿರುವ 5 ಘಟಕಗಳ ಪೈಕಿ ಇದೀಗ ಲಿಂಗಧೀರನಹಳ್ಳಿಿ ಘಟಕವನ್ನು ಸ್ಥಗಿತಗೊಳಿಸುವಂತೆ ಸ್ಥಳೀಯ ಶಾಸಕ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮುಖ್ಯಮಂತ್ರಿಿ ಬಸವರಾಜ ಬೊಮ್ಮಾಾಯಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಇದ್ದಂತಹ ಗೊಂದಲ ಸೇರಿ ಇನ್ನಿಿತರ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಿಂದ ಲಿಂಗಧೀರನಹಳ್ಳಿಿ ತ್ಯಾಾಜ್ಯ ಸಂಸ್ಕರಣಾ ಘಟಕ ಸ್ಥಗಿತಗೊಂಡಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶದ ನಂತರ ಪರಿಸರ ಸಂರಕ್ಷಣೆಗೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡು ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಘಟಕ ಪುನರಾರಂಭಿಸಲಾಗಿದೆ. ಆದರೆ, ಇದೀಗ ಘಟಕ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಪ್ರತಿಭಟಿಸುತ್ತಿಿದ್ದಾಾರೆ ಹಾಗೂ ಆ ಕುರಿತು ಸಚಿವ ಎಸ್.ಟಿ.ಸೋಮಶೇಖರ್ ಮೇಲೂ ಒತ್ತಡ ಹೇರಿದ್ದರು.
ಹೀಗಾಗಿ ಸೋಮಶೇಖರ್ ಅವರು ಮುಖ್ಯಮಂತ್ರಿಿಗಳಿಗೆ ಪತ್ರ ಬರೆದು ಘಟಕ ಸ್ಥಗಿತಗೊಳಿಸಬೇಕು, ಇಲ್ಲದಿದ್ದರೆ ಸ್ಥಳೀಯರ ಜನರ ಜತೆಗೆ ತಾವು ಸಹ ಪ್ರತಿಭಟನೆಯಲ್ಲಿ ಕೂರಬೇಕಾಗುತ್ತದೆ ಎಂದು ತಿಳಿಸಿದ್ದರು. ಸೋಮಶೇಖರ್ ಪತ್ರಕ್ಕೆೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬಸವರಾಜ ಬೊಮ್ಮಾಾಯಿ, ಕೂಡಲೇ ಘಟಕ ಬಂದ್ ಮಾಡಿ ಅಂತ ಸೂಚನೆ ನೀಡಿದರು. ಹಾಗಾಗಿ ಘಟಕವನ್ನ ಬಂದ್ ಮಾಡುವಂತೆ ಆದೇಶ ನೀಡಲಾಗಿದೆ.ಇನ್ನೂ ಮುಂದೆ ಬೆಙಗಳೂರಿನ ತ್ಯಾಜ್ಯ ಎಲ್ಲಿಗೆ ರವನಿಸ್ತರೆ ಎಂಬುದು ಬಿಬಿಎಂಪಿಗೆ ದೊಡ್ಡ ಪ್ರಶ್ನೆಯಾಗಿದೆ.