Bengaluru

12 ನಿಮಿಷದಲ್ಲಿ K.R.ಪುರಂ-ವೈಟ್‌ಫೀಲ್ಡ್ ಗೆ ನಾನ್ ಸ್ಟಾಪ್ ಮೆಟ್ರೋ ಸಂಚಾರ

ಬೆಂಗಳೂರು; ಚುನಾವಣಾ ಹೊತ್ತಲ್ಲಿ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್.ಕೇವಲ 12 ನಿಮಿಷ ಕೆಆರ್‌ ಪುರಂ- ವೈಟ್‌ಫೀಲ್ಡ್ ಗೆ ನಾನ್ ಸ್ಟಾಪ್ ಮೆಟ್ರೋ ಶೀಘ್ರದಲ್ಲೆ ಸಂಚಾರ ಆರಂಭಿಸಲಿದೆ. K.R.ಪುರಂ ಹಾಗೂ ವೈಟ್‌ ಫೀಲ್ಡ್ ಗೆ ಮೊದಲ ಪ್ರಾಯೋಯೋಗಿಕ ಮೆಟ್ರೋ ರೈಲು ಸಂಚಾರ ಶುರುವಾಗಿದೆ.

80 ಕಿಮೀ ವೇಗದಲ್ಲಿ ತೆರಳಿದ ರೈಲು 13 ಕಿಮೀಗಳನ್ನ ಕೇವಲ 12 ನಿಮಿಷದಲ್ಲಿ ತಲುಪಿದೆ.ತಿಂಗಳಾಂತ್ಯದಲ್ಲಿ ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆವ ಸಾಧ್ಯತೆ ಇದೆ.ಚುನಾವಣೆಗೂ ಮುನ್ನವೇ ಈ ಮಾರ್ಗದಲ್ಲಿ ಮೆಟ್ರೋ ಸಂಚಾರಿಸಲಿದೆ. ಫೆ.11ರಿಂದ BMRCL ಪ್ರಾಯೋಗಿಕವಾಗಿ ಸಂಚರಿಸಲಿದ್ದು ಅದಾದ ಬಳಿಕವೇ ಈ ಮಾರ್ಗದಲ್ಲಿನ ರೈಲು ಸಂಚಾರದ ನೈಜ ಅವಧಿ ತಿಳಿಯಲಿದೆ.

Share Post