BengaluruScienceTechTechnology

ಚಂದ್ರಯಾನದಲ್ಲಿ ಆಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಅಳಿಲು ಸೇವೆ; ಬಿಡಿ ಭಾಗ ಪೂರೈಸಿದ್ದ ಸಂಸ್ಥೆ

ಬೆಂಗಳೂರು; ಚಂದ್ರಯಾನ-೩ ಯಶಸ್ವಿಯಾಗಿಯಾಗಿದೆ. ವಿಕ್ರಂ ಲ್ಯಾಂಡರ್‌ ಸುರಕ್ಷಿತವಾಗಿ ಚಂದ್ರನ ಮೇಲೆ ಲ್ಯಾಂಡ್‌ ಆಗಿದೆ. ಇದರ ಹಿಂದೆ ಇಸ್ರೋನ ಹಲವಾರು ವಿಜ್ಞಾನಿಗಳ ಶ್ರಮವಿದೆ. ಇದರ ಜೊತೆಗೆ ಹಲವು ಕಂಪನಿಗಳು ಚಂದ್ರಯಾನಕ್ಕಾಗಿ ಹಲವು ಉಪಕರಣಗಳನ್ನು ಪೂರೈಕೆ ಮಾಡಿವೆ. ಅದರಲ್ಲಿ ಬೆಂಗಳೂರಿನ ಮೂಲದ್ದೇ ಆದ ಆಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಕೂಡಾ ಒಂದು.

ಆಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಚಂದ್ರಯಾನ-೩ಕ್ಕಾಗಿ ಕೆಲ ಉಪಕರಣಗಳನ್ನು ಪೂರೈಕೆ ಮಾಡಿದೆ. ಚಂದ್ರಯಾನ ಲಾಂಚರ್‌ನ ಕೆಲ ಘಟಕಗಳು. ವಿಕ್ರಮ್‌ ಲ್ಯಾಂಡರ್‌ಗಾಗಿ ಕೆಲವು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಪೂರೈಕೆ ಮಾಡಿದೆ. ಈ ಮೂಲಕ ಚಂದ್ರಯಾನಕ್ಕಾಗಿ ಅಳಿವು ಸೇವೆ ಸಲ್ಲಿಸಿದೆ.

ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಎಚ್‌.ಎಸ್‌.ಶಂಕರ್‌ ಅವರು ಆಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌. ಭಾರತ ಸರ್ಕಾರದ ಮೇಕ್‌ ಇನ್‌ ಇಂಡಿಯಾ ನೀತಿಯನ್ನು ಕಾರ್ಯರೂಪಕ್ಕೆ ತರುವ ಗುರಿ ಹೊಂದಿರುವ ಈ ಸಂಸ್ಥೆ R&D, manufacture, assembly, testing, qualification, integration & installation of Defence Electronics, Avionics & Space Satellites systems ಪೂರೈಕೆಯಲ್ಲಿ ಹೆಸರಾಗಿದೆ.

2004ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿರುವ ಆಲ್ಫಾ ಡಿಸೈನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ, ದೇಶ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಗುಣಮಟ್ಟದ ರಕ್ಷಣಾ ತಂತ್ರಜ್ಞಾನ ಉಪಕರಣಗಳು ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಉಪಕರಣಗಳನ್ನು ಪೂರೈಕೆ ಮಾಡುತ್ತದೆ.

 

Share Post