Bengaluru

ಹೊರರಾಜ್ಯಗಳಿಂದ ಬರುವವರಿಗೆ ಹೊಸ ಮಾರ್ಗಸೂಚಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಮತ್ತು ಒಮಿಕ್ರಾನ್‌ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಬಿಗಿ ರೂಲ್ಸ್‌ ಜಾರಿಮಾಡಿದೆ. ರಾಜ್ಯದಲ್ಲಿ ಈವರೆಗೆ
೨೨೬ ಜನರಿಗೆ ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಂಡಿದ್ದು, ನೈಟ್‌ ಕರ್ಫ್ಯೂ ಜೊತೆಗೆ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಲಿದ್ದಾರೆ. ಇದ್ದರಿಂದ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವವರಿಗೆ ಸರ್ಕಾರ ಹೊಸ ಕೋವಿಡ್‌ ಮಾರ್ಗಸೂಚಿ ಹೊರಡಿಸಿದೆ. ಅದರಲ್ಲೂ ಗೋವಾದಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಅಲ್ಲಿಂದ ಕರ್ನಾಟಕಕ್ಕೆ ಬರುವವರಿಗೆ ಕೆಲ ನಿಯಮ ಜಾರಿಗೊಳಿಸಿದೆ.
ಗೋವಾದಿಂದ ಕರ್ನಾಟಕಕ್ಕೆ ಬರುವವರು ಕೊರೋನಾ ಟೆಸ್ಟ್‌ ವರದಿ ಕಡ್ಡಾಯವಾಗಿದೆ. ಆರ್ ಟಿಪಿಆರ್‌ ರಿಪೋರ್ಟ್‌ ಇದ್ದರೆ ಮಾತ್ರ ಬಸ್‌ ಮತ್ತು ವಿಮಾನಗಳಿಗೆ ಅವಕಾಶವಿದೆ. ಇದರ ಜೊತೆ ಗೋವಾ ಚೆಕ್‌ ಪೋಸ್ಟ್‌ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ರೈಲುಗಳಿಗೆ ಹೋಗುವವರು ಕೂಡ ವರದಿಯನ್ನು ಅಧಿಕಾರಿಗಳಿಗೆ ನೀಡಬೇಕು. ಹಾಗಿದ್ದಲ್ಲಿ ಮಾತ್ರ ಪ್ರಯಾಣಿಕರು ಕರ್ನಾಟಕಕ್ಕೆ ಬರಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Post