BengaluruCrime

ಹೆಸರಿಗೆ ಇವೆಂಟ್‌ ಮ್ಯಾನೇಜ್‌ಮೆಂಟ್‌; ನಡೆಸ್ತಿದ್ದದ್ದು ಹೈಟೆಕ್‌ ವೇಶ್ಯಾವಾಟಿಕೆ!

ಬೆಂಗಳೂರು; ಈವೆಂಟ್‌ ಮ್ಯಾನೇಜ್ಮೆಂಟ್‌ ಕಂಪನಿ ಎಂದು ಹೇಳಿಕೊಂಡು ಕೆಲಸ ಕೊಡುತ್ತೇವೆ ಎಂದು ಯುವತಿಯರನ್ನು ಆಕರ್ಷಿಸಿ, ಅವರನ್ನು ಹೈಟೆಕ್‌ ವೇಶ್ಯಾವಾಟಿಕೆಗೆ ದೂಡುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ..
ಬೆಂಗಳೂರಿನ ಪಟ್ಟೆಗಾರಪಾಳ್ಯದ ನಿವಾಸಿಗಳಾದ ಪ್ರಕಾಶ್‌ ಹಾಗೂ ಪಾರಿಜಾತ ಅವರೇ ಬಂಧಿತ ಆರೋಪಿಗಳು.. ಇವರು ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ನಡೆಸುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದರು.. ಹೆಸರನ್ನು ರಾಕೇಶ್‌ ಹಾಗೂ ಪೂಜಾ ಎಂದು ಬದಲಿಸಿಕೊಂಡಿದ್ದರು.. ಉತ್ತರ ಕರ್ನಾಟಕದ ಬಡ ಹೆಣ್ಣು ಮಕ್ಕಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ ಆರೋಪಿಗಳು, ಕೆಲಸ ಕೊಡಿಸುವ ನೆಪದಲ್ಲಿ ಅವರನ್ನು ಬೆಂಗಳೂರಿಗೆ ಕರೆತರುತ್ತಿದ್ದರು.. ನಂತರ ಅವರಿಗೆ ಬಹುಬೇಗ ಹಣ ಗಳಿಸುವ ಬಗ್ಗೆ ಆಸೆ ಹುಟ್ಟಿಸುತ್ತಿದ್ದರು.. ಅನಂತರ ಆ ಹೆಣ್ಣು ಮಕ್ಕಳನ್ನು ತಮಿಳುನಾಡು, ಪಾಂಡಿಚೇರಿಯ ರೆಸಾರ್ಟ್‌ಗಳಿಗೆ ಕರೆದುಕೊಂಡು ಹೋಗಿ ಶ್ರೀಮಂತರು, ಉದ್ಯಮಿಗಳ ಜೊತೆ ರತಿಕ್ರೀಡೆಗೆ ದೂಡುತ್ತಿದ್ದರು..
ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವಿವಿಧ ಸ್ಥಳಗಳಿಗೆ ವಾರಕ್ಕೊಮ್ಮೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು.. ರೆಸಾರ್ಟ್‌ಗಳಿಗೆ ಹೊರ ರಾಜ್ಯಗಳಿಂದ ಶ್ರೀಮಂತರು, ಉದ್ಯಮಿಗಳು, ಹಣವಂತರು ಬರುತ್ತಿದ್ದರು.. ಅವರ ಬಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸುತ್ತಿದ್ದರು.. ಈ ದಂಪತಿ ಗ್ರಾಹಕರಿಗೆ ಮದ್ಯ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು.. ಈ ಪಾರ್ಟಿಗೆ ಬರುವವರ ಬಳಿಯಿಂದ 25 ಸಾವಿರದಿಂದ 50 ಸಾವಿರ ರೂಪಾಯಿಯವರೆಗೂ ಪಡೆಯುತ್ತಿದ್ದರು..
ಹೀಗೆ ಬೆಂಗಳೂರಿನಿಂದ ತಮಿಳುನಾಡಿಗೆ ಹುಡುಗಿಯರನ್ನು ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಮಾಹಿತಿ ಅರಿತ ಸಿಸಿಬಿ ಪೊಲೀಸರು ದಾಳಿ ನಡೆಸಲಾಗಿದ್ದು, ಈ ವೇಳೆ ನಾಲ್ವರು ಯುವತಿಯರು ಕಂಡುಬಂದಿದ್ದಾರೆ.. ಅವರನ್ನು ರಕ್ಷಣೆ ಮಾಡಲಾಗಿದೆ.. ಈ ದಂಧೆ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ..

Share Post