ಬಿಜೆಪಿಯವರು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ-ಡಿಕೆಶಿ ಆರೋಪ
ಬೆಂಗಳೂರು: ಟಪ್ಪು ಪಠ್ಯ ಪರಿಷ್ಕರಣೆ, ಮುಸ್ಲಿಂರಿಗೆ ವ್ಯಾಪಾರ ನಿರ್ಬಂಧ ಸೇರಿದಂತೆ ವಿವಿಧ ವಿಚಾರಗಳಲ್ಲಿ ಬಿಜೆಪಿ ತೀರ್ಮಾನದ ಬಗೆಗೆ ರಾಜ್ಯ ಕಾಂಗ್ರೆಸ್ ಕಿಡಿ ಕಾರಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್. ಬಿಜೆಪಿಯವರು ಒಡೆದು ಆಳುವ ನೀತಿಯನ್ನು ಅನುಸರಣೆ ಮಾಡ್ತಿದಾರೆ ಅಂದ್ರು.
ಟಿಪ್ಪು ಮಾಡಿದ ಸೇವೆಯನ್ನು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತು.ಈ ಹಿಂದೆ ರಾಷ್ಟ್ರಪತಿಯವರು ಕೂಡ ಟಿಪ್ಪು ಬಗ್ಗೆ ಹಾಡಿ ಹೊಗಳಿದ್ರು. ಮನಗೆಲ್ಲರಿಗೂ ಟಿಪ್ಪು ಸ್ವಾತಂತ್ಯ ಪ್ರೇಮದ ಬಗ್ಗೆ ತಿಳಿಸಿಕೊಟ್ಟಿದ್ರು. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾದಾಗ ಅವರು ಸಹ ಟಿಪ್ಪು ಬಗ್ಗೆ ಮಾತನಾಡಿದ್ರು. ತರಾತುರಿಯಲ್ಲಿ ಪಠ್ಯ ಪುಸ್ತಕ ಬಗ್ಗೆ ಬಿಜೆಪಿ ಕ್ರಮ ಕೈಗೊಳ್ಳು ಮುಂದಾಗಿದೆ. ಸಮಿತಿ ರಚನೆ ಮಾಡಿದ್ದಾರೆ ಅದರಲ್ಲಿ ಎಲ್ಲರೂ ತಜ್ಞರಿದ್ದಾರೆ ಎಂದು ಭಾವಿಸುತ್ತೇನೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ.
ಮುಂದುವರೆದು ಬಿಜೆಪಿಯವರು ಜನರ ಹೊಟ್ಟೆಮೇಲೆ ಹೊಡೆಯುತ್ತಿದ್ದಾರೆ. ಮುಸ್ಲಿಂರ ವ್ಯಾಪಾರ-ವ್ಯವಹಾರಕ್ಕೆ ಅಡ್ಡಿ ಮಾಡಿ ಅವರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಬಿಜೆಪಿಯವರು ಬೇಕಂತ ಧರ್ಮದ ಆಧಾರದಲ್ಲಿ ಒಡೆಯಲು ಪ್ರಯತ್ನ ಮಾಡ್ತಿದೆ. ಇದು ದೇಶಕ್ಕೆ ದೊಡ್ಡ ಮಾರಕ. ಯಾರದ್ದೇ ವ್ಯಾಪಾರಕ್ಕೆ ಅಡ್ಡಿ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಗತಿಪರರು ಪತ್ರ ಬರೆದಿದ್ದಾರೆ. ಪ್ರಗತಿಪರರಿಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ಡಿಕೆಶಿ ಹೇಳಿದ್ರು..