BengaluruCrime

ಒಂದೇ ಕಿಕ್‌; ಪ್ರಾಣ ಕಳೆದುಕೊಂಡ ಮೈಸೂರಿನ ಕಿಕ್‌ ಬಾಕ್ಸರ್‌

ಮೈಸೂರು; ಎದುರಾಳಿ ಆಟಗಾರನ ಒಂದೇ ಒಂದು ಪಂಚ್‌ಗೆ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರಿನ ಕಿಕ್‌ ಬಾಕ್ಸರ್‌ ಸಾವನ್ನಪ್ಪಿದ್ದಾನೆ. 24 ವರ್ಷ ನಿಖಿಲ್‌ ಸಾವನ್ನಪ್ಪಿರುವ ಕಿಕ್‌ ಬಾಕ್ಸರ್‌. ನಾಲ್ಕು ದಿನದ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜುಲೈ 10 ರಂದು ಬೆಂಗಳೂರಿನ ಕೆಂಗೇರಿಯಲ್ಲಿ A-1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ರಿಂಗ್‌ನಲ್ಲಿ ಸೆಣಸಾಡುತ್ತಿದ್ದಂತೆ ಎದುರಾಳಿ ನಿಖಿಲ್‌ಗೆ ಒಂದು ಪಂಚ್‌ ನೀಡಿದ್ದಾನೆ. ಇದ್ರಿಂದ ಅಸ್ವಸ್ಥನಾದ ನಿಖಿಲ್‌ ಅಲ್ಲಿಯೇ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಐಸಿಯು ಚಿಕಿತ್ಸೆ ನೀಡಲಾಯಿತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿಖಿಲ್‌ ಸಾವನ್ನಪ್ಪಿದ್ದಾನೆ.

Share Post