BengaluruCrime

ಮಹಿಳಾ ಅಧಿಕಾರಿ ಕೊಲೆ; ಸುಳಿವು ನೀಡುತ್ತಾ ಮೊಬೈಲ್?

ಬೆಂಗಳೂರು; ಬೆಂಗಳೂರಿನ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಚಾಕು ಇರಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಎಂಬವರನ್ನು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿ, ಆರೋಪಿಯ ಪತ್ತೆಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

 

ಪ್ರತಿಮಾ  ಕಳೆದ 8 ವರ್ಷಗಳಿಂದ ಒಬ್ಬರೇ ಈ ಅಪಾರ್ಟ್​​ಮೆಂಟ್​​ನಲ್ಲಿ ವಾಸವಿದ್ದರು. ಈ ಸಂದರ್ಭದಲ್ಲಿ ನವೆಂಬರ್ 4ರಂದು ರಾತ್ರಿ 8.30 ಕ್ಕೆ ಈ ಘಟನೆ ಸಂಭವಿಸಿದೆ. ಇನ್ನು ಕೊಲೆಯಾದ ಪ್ರತಿಮಾ ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು. ಬೆಂಗಳೂರಿನಲ್ಲಿ ಸೀನಿಯರ್ ಜುವಾಲಜಿಸ್ಟ್​ ವಿಭಾಗದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

 

ಇದೀಗ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯವರನ್ನು, ಡ್ರೈವರ್​, ಆಫೀಸ್​ ಸ್ಟಾಪ್​ಗಳ ಜೊತೆ ಮೊಬೈಲ್​ ಅನ್ನು ಪರಿಶೀಲಿಸುತ್ತಿದ್ದಾರೆ. ಮೊಬೈಲ್​ ಮೂಲಕ ಏನಾದ್ರು ಸಾಕ್ಷಿ ಸಿಗಬಹುದೆಂದು ಪೊಲೀಸರು ನಿನ್ನೆಯಿಂದ ಹರಸಾಹಸ ಪಡುತ್ತಲೇ ಇದ್ದಾರೆ.

 

ಪ್ರತಿಮಾ ಬಳಸುತ್ತಿದ್ದ ಮೊಬೈಲ್ ಅನ್ನು ನಿನ್ನೆ ಅಂದರೆ ನ.5ಕ್ಕೆ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆಗೆ ಮಾಡುತ್ತಿದ್ದಾರೆ. ಕೊಲೆಯಾದ ವೇಳೆ ಮನೆಯ ಬಾಗಿಲು ಬಳಿ ಮೊಬೈಲ್ ಪತ್ತೆಯಾಗಿತ್ತು. ಇದನ್ನು ಸುಬ್ರಹ್ಮಣ್ಯಪುರ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.

Share Post