BengaluruPolitics

ಮಿಸ್ಟರ್‌ ನಡ್ಡಾಜಿ ನಮ್ಮನ್ನು ಹೆದರಿಸಬೇಡಿ; ಡಿ.ಕೆ.ಶಿವಕುಮಾರ್‌ ಟಾಂಗ್‌

ಬೆಂಗಳೂರು; ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೇಂದ್ರ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಜೆಪಿ ನಡ್ಡಾ ಹೇಳಿದ್ದರು. ಈ ವಿಚಾರದ ಸಂಬಂಧ ಬೆಂಗಳೂರಿನ ಸದಾಶಿವನಗರ ನಿವಾಸಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್‌ ನಡ್ಡಾ ವಿರುದ್ಧ ಹರಿಹಾಯ್ದಿದ್ದಾರೆ.

ನಡ್ಡಾ ಅವರೇ ನೀವು ನಮ್ಮನ್ನು ಹೆದರಿಸೋದಕ್ಕೆ ಬರಬೇಡಿ. ನಿಮ್ಮ ಬೆದರಿಕೆಗೆ ನಾವು ಹೆದರೋದಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ. ಮಿಸ್ಟರ್ ನಡ್ಡಾಜಿ ನಮ್ಮನ್ನು ಹೆದರಿಸಬೇಡಿ, ಏನು ಹೆದರಿಸ್ತೀರಾ? ಎಂದು ಖಾರವಾಗಿ ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ. ನೀವು ಹೆದರಿಸಿದರೆ ನಿಮ್ಮ ಶಾಸಕರು ಸುಮ್ಮನಿರಬಹುದು. ಆದ್ರೆ ನಾವು ಸುಮ್ಮನಿರುವುದಿಲ್ಲ. ನಿಮಗೆ ನಾನು ಬೆದರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Share Post