ಜೆಡಿಎಸ್ ʻಭರವಸೆ ಪತ್ರʼ ಬಿಡುಗಡೆ; ಅದರಲ್ಲಿ ಏನೇನಿದೆ..?
ಬೆಂಗಳೂರು; ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ ಪಕ್ಷ, ಚುಣಾವಣಾ ಭರವಸೆ ಪತ್ರವನ್ನೂ ಎಲ್ಲರಿಗಿಂತ ಮೊದಲು ರಿಲೀಸ್ ಮಾಡಿದೆ. ಜೆಡಿಎಸ್ ಚುನಾವಣಾ ಪ್ರಣಾಳಿಕೆಗೆ ಭರವಸೆ ಪತ್ರ ಎಂದು ಕರೆಯಲಾಗಿದೆ. ಇಂದು ಬೆಂಗಳೂರಿನ ಗೌಡ ಮನೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು, ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಣಾಳಿಕೆ ಬಿಡುಗಡೆಗೂ ಮುನ್ನೆ ಗೌಡರ ಮನೆಯಲ್ಲಿ ಅದಕ್ಕೆ ಪೂಜೆ ಮಾಡಲಾಯಿತು. ಗೌಡರ ಪತ್ನಿ ಚನ್ನಮ್ಮ ಅವರು ಪ್ರಣಾಳಿಕೆಯನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು. ಅನಂತರ ಅದನ್ನು ಬಿಡುಗಡೆ ಮಾಡಲಾಯಿತು. ಪ್ರಣಾಳಿಕೆ ಕಾರ್ಯಕ್ರಮವನ್ನು ಮತ್ತೊಮ್ಮೆ ಮಾಡಲಾಗುವುದು ಅಂತ ದೇವೇಗೌಡರು ಹೇಳಿದ್ದಾರೆ. ಇನ್ನು ಭರವಸೆ ಪತ್ರದಲ್ಲಿ 12 ಅಂಶಗಳಿವೆ. ಅವು ಕೆಳಗಿನಂತಿವೆ.
1. ಮಾತೃ ಶ್ರೀ ಮತ್ತು ಮಹಿಳಾ ಸಬಲೀಕರಣ
2. ಕನ್ನಡವೇ ಮೊದಲು
3. ರೈತ ಚೈತನ್ಯ
4. ಹಿರಿಯ ನಾಗರಿಕರಿಗೆ ಸನ್ಮಾನ
5. ಶಿಕ್ಷಣವೇ ಆಧುನಿಕ ಶಕ್ತಿ
6. ಆರೋಗ್ಯ ಸಂಪತ್ತು
7. ವಿಕಲಚೇತನರಿಗೆ ಆಸರೆ
8. ಆರಕ್ಷಕರಿಗೆ ಅಭಯ
9. ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ
10. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಏಳಿಗೆ
11. ಯುವಜನ ಸಬಲೀಕರಣ
12. ವೃತ್ತಿನಿರತ ವಕೀಲರ ಅಭ್ಯುದಯ