BengaluruPolitics

ರಾಜ್ಯದಲ್ಲಿ ಮೋದಿ, ಶಾ ಮೆಗಾ ರೋಡ್‌ ಶೋ; 14 ದಿನದಲ್ಲಿ 10 ಸಮಾವೇಶಕ್ಕೆ ಸಿದ್ಧತೆ

ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗೋಕೂ ಮೊದಲೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದರು. ಈಗಾಗಲೇ ಹಲವು ಬಾರಿ ರಾಜ್ಯಕ್ಕೆ ಬಂದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರು ಮತದಾರರನ್ನು ಸೆಳೆಯಲು ಬಿಗ್‌ ಪ್ಲ್ಯಾನ್‌ ಮಾಡಿದ್ದಾರೆ. ಏಪ್ರಿಲ್‌ 25ರಿಂದ ಅವರು ರಾಜ್ಯದಲ್ಲಿ ರೋಡ್‌ ಶೋಗಳನ್ನು ನಡೆಸಲಿದ್ದಾರೆ. ಪ್ರಧಾನಿ ಮೋದಿ ಜೊತೆಗೆ ಅಮಿತ್‌ ಶಾ ಕೂಡಾ ರಾಜ್ಯಕ್ಕೆ ಆಗಮಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದೆ.

ಮಾಹಿತಿ ಪ್ರಕಾರ ಪ್ರಧಾನಿ ಮೋದಿಯವರು ಏಪ್ರಿಲ್‌ 25ರಿಂದ 14 ದಿನಗಳಲ್ಲಿ ಹತ್ತು ರೋಡ್‌ ಶೋ ಹಾಗೂ ಸಮಾವೇಶಗಳಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ. ಮೂರು ಜಿಲ್ಲೆಗಳಿಗೆ ಒಂದರಂತೆ ಒಟ್ಟು ಮೂವತ್ತು ಜಿಲ್ಲೆಗಳಿಗೆ ಪ್ರಧಾನಿ ಮೋದಿಯವರು ಹತ್ತು ಸಮಾವೇಶಗಳನ್ನು ನಡೆಸಲಿದ್ದಾರೆ. ಈ ಸಮಾವೇಶಗಳಲ್ಲಿ ಲಕ್ಷ ಲಕ್ಷ ಜನರನ್ನು ಸೇರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ.

Share Post