Bengaluru

ಮಾರ್ಚ್‌ 17ಕ್ಕೆ ಜೇಮ್ಸ್‌ ರಿಲೀಸ್‌; ಪ್ರತಿ ಚಿತ್ರಮಂದಿರ ಬಳಿಯೂ ಪುನೀತ್‌ ಕಟೌಟ್‌

ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ರಿಲೀಸ್‌ ದಿನಾಂಕ ಹತ್ತಿರವಾಗುತ್ತಿದೆ. ಬಿಡುಗಡೆಗೂ ಮುನ್ನ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬೆಂಗಳೂರಿನ ಕಮಲಾನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ  ಅಪ್ಪು ಕಟೌಟ್ ಗಳನ್ನು ನಿರ್ಮಿಸಿದ್ದು, ಅಭಿಮಾನಿಗಳು ಪೂಜೆ ಸಲ್ಲಿಸಿ ಗೌರವಿಸಿದ್ದಾರೆ. ಡಾ. ರಾಜ್ ಕುಮಾರ್, ಪಾರ್ವತಮ್ಮ ಹಾಗೂ ಅಪ್ಪುವಿನ ಕಟೌಟ್ ಗಳನ್ನು ಹಾಕಲಾಗಿದೆ.

ಜೇಮ್ಸ್​’ ಮಾ.17ರಂದು ರಿಲೀಸ್​ ಆಗುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್​ ಇದೆ. ಪ್ರತಿ ಚಿತ್ರಮಂದಿರದಲ್ಲೂ ಈ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿದೆ. ಪುನೀತ್​ ರಾಜ್​ಕುಮಾರ್​ ಅವರ ಕಟೌಟ್​ಗಳನ್ನು ನಿಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್​ ತಲೆ ಎತ್ತಿದೆ. ಮಾಗಡಿ ರಸ್ತೆಯಲ್ಲಿ ಇರುವ ವೀರೇಶ್​ ಥಿಯೇಟರ್​ ಮುಂಭಾಗ ಬರೋಬ್ಬರಿ 30 ಕಟೌಟ್​ ನಿಲ್ಲಿಸಲು ಪುನೀತ್​ ಅಭಿಮಾನಿಗಳು ಪ್ಲ್ಯಾನ್​ ಮಾಡಿದ್ದಾರೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ.

Share Post