Bengaluru

ರೈತರ ಮನೆ ಬಾಗಿಲಿಗೆ ಪಹಣಿ, ಜಾತಿ-ಆದಾಯ ಪ್ರಮಾಣಪತ್ರ: ಸಚಿವ ಅಶೋಕ್​

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಎಲ್ಲ ರೈತರಿಗೂ ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ. ಮಾರ್ಚ್ 12ಕ್ಕೆ ಈ ಯೋಜನೆಗೆ ಚಾಲನೆ ನೀಡಲಿದ್ದು, ಅಂದು 45 ಲಕ್ಷ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ 700ಕ್ಕೂ ಹೆಚ್ಚು ಜನಸೇವಾ ಕೇಂದ್ರಗಳಿಂದ ರೈತರಿಗೆ ವಿವಿಧ ಸೇವೆ ಕೊಡಲಾಗುತ್ತಿದೆ. ಪಹಣಿ, ಮ್ಯುಟೇಷನ್ ಇತ್ಯಾದಿ ನೀಡಲಾಗುತ್ತಿದೆ. ಇದಕ್ಕೆ ಕನಿಷ್ಠ ದರವಾಗಿ 15 ರೂ. ಶುಲ್ಕ ಪಡೆಯಲಾಗುತ್ತಿದೆ. ಡೇಟಾ ವೆಚ್ಚ, ಪರಿಕರ ವೆಚ್ಚಗಳನ್ನು ನಿಭಾಯಿಸಲ ಈ ಹಣ ಪಡೆಯಲಾಗುತ್ತಿದೆ. ಆನ್ ಲೈನ್​ನಲ್ಲೇ ನೋಡಲು ಶುಲ್ಕವಿಲ್ಲ. ಆದರೆ, ಪಹಣಿ, ಮ್ಯುಟೇಷನ್ ಇತ್ಯಾದಿ ಪ್ರಿಂಟ್ ಪ್ರತಿ ಪಡೆಯಲು ಶುಲ್ಕ ಪಡೆಯಲಾಗುತ್ತದೆ ಎಂದರು.

Share Post