BengaluruCinemaPolitics

ಲೀಡರ್‌ ಸಿದ್ದರಾಮಯ್ಯ ಸಿನಿಮಾ ಪೋಸ್ಟರ್‌ ಬಿಡುಗಡೆ

ಬೆಂಗಳೂರು; ಚುನಾವಣಾ ರಾಜಕೀಯ ಜೋರಾಗಿರುವ ಬೆನ್ನಲ್ಲೇ ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾ ಸುದ್ದಿ ಕೂಡಾ ಬಂದಿದೆ. ಈ ಸಿನಿಮಾದ ಪೋಸ್ಟರ್‌ ಇಂದು ರಿಲೀಸ್‌ ಆಗಿದೆ. ರಾಮನವಮಿ ಹಿನ್ನೆಲೆಯಲ್ಲಿ ಇಂದು ಲೀಡರ್‌ ಸಿದ್ದರಾಮಯ್ಯ ಎಂಬ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ.

ಸತ್ಯ ರತ್ನಂ ಅವರು ಸಿದ್ದರಾಮಯ್ಯ ಜೀವನಚರಿತ್ರೆಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರ ಪೋಸ್ಟರ್‌ನ್ನು ಸಿದ್ದರಾಮಯ್ಯ ಮನೆಯ ಮುಂದೆಯೇ ಲಾಂಚ್ ಮಾಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾರೆಕ್ಟರ್‌ಗೆ ತಮಿಳು ನಟ ವಿಜಯ್ ಸೇತುಪತಿ ಅವರನ್ನು ಅಪ್ರೋಚ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಿನಿಮಾದಲ್ಲಿ ರಾಜಕೀಯ ಜರ್ನಿ ಜೊತೆಗೆ ಲವ್ ಸ್ಟೋರಿ ಎಳೆಯೂ ಇರಲಿದೆ ಎಂದು ತಿಳಿದುಬಂದಿದೆ.

Share Post