Bengaluru

ಪಠ್ಯದಲ್ಲಿ ಕುವೆಂಪು ಬಗ್ಗೆ ಬೇಜವಬ್ದಾರಿ ಪರಿಚಯ; ಅಭಿಮಾನಿಗಳ ಬೇಸರ

ಬೆಂಗಳೂರು; ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನಡೆಯುತ್ತಿರುವ ವಿವಾದ ಮುಂದುವರೆಯುತ್ತಲೇ ಇದೆ. ಇದೀಗ ರಾಷ್ಟ್ರಕವಿ ಕುವೆಂಪು ಅವರನ್ನು ಪರಿಚಯಿಸಿರುವ ಪರಿಯಿಂದ ಅವರ ಅಭಿಮಾನಿಗಳಿಗೆ ಅಸಮಾಧಾನ ತಂದಿದೆ. ಪಠ್ಯವೊಂದರಲ್ಲಿ ಕುವೆಂಪು ಅವರನ್ನು ಪರಿಚಯಿಸುವಾಗ ಇವರಿಗೆ ಚಿಕ್ಕಂದಿನಿಂದಲೂ ಕತೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು. ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’. ಎಂದು ಬರೆದಿದೆ. ಇಲ್ಲಿ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಉಲ್ಲೇಖಿಸಿರುವುದಕ್ಕೆ ಕುವೆಂಪು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಜೊತೆಗೆ ಬೇರೆ ಲೇಖಕರ ಬಗ್ಗೆ ವಿವರವಾಗಿ ಬರೆದು, ಕುವೆಂಪು ಅವರನ್ನು ಕೆಲವೇ ಪದಗಳಲ್ಲಿ ಪರಿಚಯಿಸಿರುವುದಕ್ಕೂ ಆಕ್ರೋಶ ವ್ಯಕ್ತವಾಗಿದೆ.
   ಕುವೆಂಪು ಅವರ ಪರಿಚಯದಲ್ಲಿ ರಾಮಯಣ ದರ್ಶನಂ ಕೃತಿಯನ್ನೇ ಹೆಸರಿಸಿಲ್ಲ. ಅವರ ಪ್ರಮುಖ ಕೃತಿಗಳು, ಪ್ರಶಸ್ತಿಗಳನ್ನೂ ಅಲ್ಲಿ ಪಟ್ಟಿ ಮಾಡಿಲ್ಲ. ಚುಟುಕಾಗಿ ಕುವೆಂಪು ಅವರನ್ನು ಪರಿಚಯಿಸಲಾಗಿದೆ. ಆದರೆ ಬನ್ನಂಜೆ ಗೋವಿಂದಾಚಾರ್ಯರನ್ನು ಪರಿಚಯಿಸುವಾಗ ವಿವರವಾಗಿ ಹೇಳಲಾಗಿದೆ. ಕುವೆಂಪು ಬಗ್ಗೆ ಯಾಕಿಷ್ಟು ಬೇಜವಾಬ್ದಾರಿ ಎಂದು ಪ್ರಶ್ನಿಸಲಾಗಿದೆ.
Share Post