Bengaluru

ವೋಲ್ವೊ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ, ಏನು ಗೊತ್ತಾ?

ಬೆಂಗಳೂರು: ನಗರದಲ್ಲಿ ಜನರು ಓಡಾಡುವುದು ತುಂಬ ಕಷ್ಟವಾಗಿದೆ. ಹೀಗಾಗಿ ಅವರು ಸುಲಭದ ಮಾರ್ಗವನ್ನು ಅನುಸರಿಸುತ್ತಾರೆ. ಬೆಂಗಳೂರು ಮಂದಿ ಹೆಚ್ಚಾಗಿ ಮೇಟ್ರೋ ಮತ್ತು ವೋಲ್ವೊ ಬಸ್‌ನಲ್ಲಿ ಓಡಾಡುತ್ತಾರೆ. ಇದೀಗ ವೋಲ್ವೊ ಬಸ್ ಪ್ರಯಾಣಿಕರಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಇನ್ಮುಂದೆ ವೋಲ್ವೊ ಬಸ್ ಟಿಕೆಟ್ ದರ ಶೇ.34ರಷ್ಟು ಕಡಿತ ಆಗಲಿದೆ. ವಜ್ರ ಸಾರಿಗೆಗಳ ಪ್ರಯಾಣ ದರ ಶೇಕಡಾ 34ರಷ್ಟು ಕಡಿತಗೊಳಿಸಿ ಆದೇಶ ನೀಡಲಾಗಿದೆ. ದಿನದ ಪಾಸ್, ಮಾಸಿಕ ಪಾಸ್ ಸೇರಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. ಡಿಸೆಂಬರ್ 17ರಿಂದ ಜಾರಿಗೆ ತರುವಂತೆ ಬಿಎಂಟಿಸಿಯಿಂದ ಆದೇಶ ನೀಡಲಾಗಿದೆ. ₹120 ಇದ್ದ ದಿನದ ಪಾಸ್ ಇನ್ಮುಂದೆ 100 ರೂ.ಗೆ ಲಭ್ಯ ಆಗಲಿದೆ. ₹2,000 ಇದ್ದ ಮಾಸಿಕ ಪಾಸ್ ದರ ಡಿಸೆಂಬರ್ 17ರಿಂದ ₹1,500 ಆಗಲಿದೆ. 50 ಕಿ.ಮೀ.​ಗೆ ₹90 ಇದ್ದ ಟಿಕೆಟ್​ ದರ 50 ರೂ.ಗೆ ಇಳಿಕೆ ಮಾಡಲಾಗಿದೆ.ಈಗಾಗಲೇ 09 ಮಾರ್ಗಗಳಲ್ಲಿ 83 ಎಸಿ ಬಸ್​ ಕಾರ್ಯನಿರ್ವಹಿಸುತ್ತಿದೆ. 17/12/21 ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ಎಸಿ ಬಸ್​ಗಳನ್ನ ಹೆಚ್ಚುವರಿಯಾಗಿ ಬಿಡಲಾಗುವುದು. 120 ರೂ ಇದ್ದ ದಿನದ ಪಾಸು ಇನ್ನು ಮುಂದೆ 100ರೂ ಗೆ ಲಭ್ಯ ಆಗಲಿದೆ. 2000ರೂ ಇದ್ದ ಮಾಸಿಕ ಪಾಸಿನ ದರ ಶುಕ್ರವಾರದಿಂದ 1500ರೂ ಗೆ ಸಿಗಲಿದೆ. ಈ ಹಿಂದೆ 50 ಕಿಲೋಮೀಟರ್​ಗೆ 90ರೂ ಇದ್ದ ಟಿಕೆಟ್​ ದರ ಶುಕ್ರವಾರದಿಂದ 50 ರೂಗೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

Share Post