ಕ್ಯಾನ್ಸರ್ ಪೀಡಿತ ಬಾಲ ಅಭಿಮಾನಿಯನ್ನು ಭೇಟಿ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು; ಪಟ್ಟ ಬಾಲಕಿಯೊಬ್ಬಳು ಕ್ಯಾನ್ಸರ್ ಪೀಡಿತಳಾಗಿದ್ದು, ಬೆಂಗಳೂರಿನ ಶ್ರೀ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈಕೆಗೆ ನಟ ಸುದೀಪ್ ಅಂದ್ರೆ ಇಷ್ಟ. ಸುದೀಪ್ ಅವರನ್ನು ನೋಡಬೇಕು ಎಂದು ಕನವರಿಸುತ್ತಿದ್ದಳು. ಕೊನೆಗೂ ಆಕೆಯ ಆಸೆ ಈಡೇರಿದೆ. ಇಂದು ಬೆಳಗ್ಗೆ ನಟ ಸುದೀಪ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಜೊತೆ ಮಾತನಾಡಿದ್ದಾರೆ.
ಸಾಕ್ಷಿ ಎಂಬ ಬಾಲಕಿಯೇ ಕ್ಯಾನ್ಸರ್ ಗೆ ತುತ್ತಾಗಿರುವಾಕೆ. ಈಕೆ ಸುದೀಪ್ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಳು. ಈ ಮಾಹಿತಿ ಅರಿತ ಸುದೀಪ್ ಅವರು, ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕುಟುಂಬದವರ ಜೊತೆ ಮಾತನಾಡಿದ್ದಾರೆ. ನಂತರ ಬಾಲಕಿಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಆಟೋಗ್ರಾಫ್ ಸಹಾ ನೀಡಿದ್ದಾರೆ.