Bengaluru

ಇಂದಿನಿಂದ ವಿಧಾನಮಂಡಲ ಅಧಿವೇಶನ; ಕಾವೇರಿಲಿದೆ ಕಲಾಪ

ಬೆಂಗಳೂರು; ಇಂದಿನಿಂದ ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳಲಿದೆ. ಇಂದಿನಿಂದ ಸೆಪ್ಟೆಂಬರ್‌23ರವರೆಗೆ ಅಧಿವೇಶನ ನಡೆಯಲಿದ್ದು, ಹತ್ತು ದಿನಗಳ ಕಾಲ ಕಲಾಪಗಳು ಇರಲಿವೆ. ಅಧಿವೇಶನ ಸಖತ್‌ ಕಾವೇರುವ ಸಾಧ್ಯತೆ ಇದೆ. ಗುತ್ತಿಗೆ ನಲವತ್ತು ಪರ್ಸೆಂಟ್‌ ಕಮೀಷನ್‌ ಸೇರಿ ಹಲವು ವಿಚಾರಗಳನ್ನಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ ನಡೆಸಿವೆ.

ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಲಂಚದ ಆರೋಪ, ಇತ್ತೀಚಿನ ಮಳೆ ಮತ್ತು ಪ್ರವಾಹದಿಂದ ಜನರಿಗಾದ ಸಂಕಷ್ಟ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಅವಾಂತರ, ಪಿಎಸ್‌ಐ ಹಾಗೂ ಹಲವು ನೇಮಕಾತಿ ಹಗರಣಗಳು ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಭಯ ಪಕ್ಷಗಳು ಸಜ್ಜಾಗಿವೆ. ಇದಕ್ಕೆ ತಿರುಗೇಟು ನೀಡಲು ಬಿಜೆಪಿಯೂ ತಯಾರಿ ನಡೆಸಿದೆ.

Share Post