ಹಕ್ಕಿಜ್ವರದ ಭೀತಿ-ಪುಣೆಯಲ್ಲಿ 25,000ಕೋಳಿಗಳ ಮಾರಣ ಹೋಮ
ಪುಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಭೀತಿಯಿಂದಾಗಿ ಜಿಲ್ಲೆಯ ವೆಹ್ಲೋಲಿ ಎಂಬಲ್ಲಿರುವ ಕೋಳಿ ಫಾರಂನಲ್ಲಿ ಸಾವಿರಾರು ಕೋಳಿಗಳ ಮಾರಣ ಹೋಮ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೋಂಕು ಹರಡದಂತೆ ತಡೆಗಟ್ಟಲು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಾಜೇಶ್ ಜೆ.ನಾರ್ವೇಕರ ಸೂಚನೆ ನೀಡಿದರು. ಕೂಡಲೇ ಆ ಫಾರಂನಲ್ಲಿರುವ ಕೋಳಿಗಳನ್ನು ಸಾಯಿಸುವಂತೆ ಆದೇಶ ಮಾಡಿದ್ರು.
ವೆಹ್ಲೋಲಿಯಿಂದ ಕೆಲವು ಕಿಲೋಮೀಟರ್ಗಳ ವ್ಯಾಪ್ತಿಯಲ್ಲಿರುವ ಕೋಳಿಫಾರಂಲ್ಲಿರುವ ಸುಮಾರು 25,000 ಕೋಳಿಗಳನ್ನು ಕೊಲ್ಲುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಹೆಚ್5ಎನ್1 ಏವಿಯನ್ ಇನ್ಫ್ಲುಯೆಂಜಾದಿಂದ ಪಕ್ಷಿಗಳು ಸಾವನ್ನಪ್ಪಿವೆ ಎಂದು ಥಾಣೆ ಜಿಪಂ ಸಿಇಒ ಡಾ. ಬಾಹುಸಾಹೇಬ್ ದಂಗಡೆ ಬಹಿರಂಗಪಡಿಸಿದರು. ಹಕ್ಕಿ ಜ್ವರ ಪ್ರಕರಣಗಳನ್ನು ಗುರುತಿಸಿ, ಅದನ್ನು ಕೇಂದ್ರ ಪಶುಸಂಗೋಪನಾ ಇಲಾಖೆಯ ಗಮನಕ್ಕೆ ತರಲಾಗಿದೆ. ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಇಒ ತಿಳಿಸಿದ್ದಾರೆ. ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಯಿತು.