BengaluruBusiness

ಉದ್ಯೋಗ ಮಾಹಿತಿ; KPTCL, ಎಸ್ಕಾಂಗಳಲ್ಲಿ 2975 ಹುದ್ದೆಗಳಿಗೆ ನೇಮಕಾತಿ

ಬೆಂಗಳೂರು; ಸರ್ಕಾರಿ ಕೆಲಸ ಹುಡುಕುತ್ತಿರುವವರು ಹಾಗೂ ವಿದ್ಯುತ್‌ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದುಕೊಳ್ಳುವವರಿಗೆ ಇದು ಒಳ್ಳೆಯ ಅವಕಾಶ.. ರಾಜ್ಯದಲ್ಲಿ ಸುಮಾರು 2975 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.. ಕೆಪಿಟಿಸಿಎಲ್‌ ಹಾಗೂ ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಈ ಅರ್ಜಿ ಕರೆಯಲಾಗಿದೆ.. ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ..

ಕೆಪಿಟಿಸಿಎಲ್‌ನ ಅಧಿಕೃತ ವೆಬ್‌ಸೈಟ್‌ ನಲ್ಲಿ ಅರ್ಜಿ ಸಲ್ಲಿಸಬಹುದು.. 433 ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗಳನ್ನು ವಿವಿಧ ಎಸ್ಕಾಂಗಳು ಹಾಗೂ ಕೆಪಿಟಿಸಿಎಲ್‌ನಲ್ಲಿ ಭರ್ತಿ ಮಾಡಲಾಗುತ್ತಿದೆ.. ಇನ್ನು 2542 ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳಿಗಾಗಿಯೂ ಅರ್ಜಿ ಕರೆಯಲಾಗಿದೆ.. ಅರ್ಹತೆ ಮತ್ತಿತರ ವಿಚಾರಗಳನ್ನು ಅಧಿಕೃತ ಇಲಾಖೆಯ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.. ಅದನ್ನು ಓದಿಕೊಂಡು ಅರ್ಹತೆ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು..

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅಕ್ಟೋಬರ್‌ 21ರಿಂದ ಅರ್ಜಿ ಸಲ್ಲಿಕೆ ಶುರುವಾಗಲಿದ್ದು, ನವೆಂಬರ್‌ 20ಕ್ಕೆ ಅಂತ್ಯವಾಗಲಿದೆ.. ಹೀಗಾಗಿ ಆದಷ್ಟು ಬೇಗ ಅರ್ಹರು ಅರ್ಜಿ ಸಲ್ಲಿಸಬಹುದು.

Share Post