ಪರೀಕ್ಷೆ ಬರೆದು 10 ವರ್ಷ ಆಯ್ತು; ಈಗ ಫಲಿತಾಂಶ ಕೊಡ್ತಾರಂತೆ..!
ಬೆಂಗಳೂರು; ಯಾವುದೇ ವಿವಿಯಲ್ಲಿ ಪರೀಕ್ಷೆ ಬೆರೆದ ಕೆಲ ತಿಂಗಳುಗಳಲ್ಲೇ ರಿಸಲ್ಟ್ ಬಂದ್ಬಿಡುತ್ತೆ. ಏನಾದರೂ ಸಮಸ್ಯೆ ಇದ್ದರೆ ಒಂದೆರಡು ತಿಂಗಳು ಲೇಟ್ ಆಗಬಹುದು. ಆದ್ರೆ ಬೆಂಗಳೂರು ಯೂನಿವರ್ಸಿಟಿ ಮಾತ್ರ ಫುಲ್ ಡಿಫರೆಂಟ್. ಈ ವಿವಿ ಬಗ್ಗೆ ಹಲವಾರು ಅಪವಾದಗಳಿವೆ. ಅದ್ರಲ್ಲೂ ಪರೀಕ್ಷೆ ಬರೆದು ಹತ್ತು ವರ್ಷವಾದ ಮೇಲೆ ರಿಸಲ್ಟ್ ನೀಡಲು ಮುಂದಾಗಿರುವ ಬೆಂಗಳೂರು ವಿವಿಗೆ ಅವಾರ್ಡ್ ಕೊಡಬೇಕು ಅಂತ ಕೆಲವರು ಮಾತಾಡುತ್ತಿದ್ದಾರೆ.
ಹೌದು, 2013ರಲ್ಲಿ ನಡೆದ ಪರೀಕ್ಷೆಗೆ 2023ರಲ್ಲಿ ಫಲಿತಾಂಶ ಪ್ರಕಟಿಸಲಿದೆ. 2013ರಲ್ಲಿ ಅಂದರೆ ಹತ್ತು ವರ್ಷದ ಹಿಂದೆ ನಡೆದಿರುವ ಸ್ನಾತಕೋತ್ತರ ಹಾಗೂ ಪದವಿ ಪರೀಕ್ಷೆಯ ಉತ್ತರ ಪತ್ರಿಕೆಗಳು ಮಿಸ್ ಆಗಿದ್ದರು. ಹಾಗಾಗಿ 115 ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾಗಿರಲಿಲ್ಲ. ಹಿಂದಿನ ಕುಲಸಚಿವರು, ಈ ಸಂಬಂಧ ಕುಲಪತಿಗೆ ಪತ್ರ ಬರೆದಿದ್ದರು. ಆಗ ಸಿಂಡಿಕೇಟ್ ಸದ್ಯಸ ಟಿವಿ ರಾಜು ನೇತೃತ್ವದಲ್ಲಿ ವರದಿ ನೀಡೋಕೆ ಕಮಿಟಿ ರಚನೆ ಮಾಡಲಾಗಿತ್ತು. ಕಮಿಟಿಯಿಂದ ಹತ್ತು ವರ್ಷಗಳ ಬಳಿಕ ವರದಿ ಬಂದಿದೆ.
ಹಿಂದಿನ ಪರೀಕ್ಷೆಗಳಲ್ಲಿ ವಿಧ್ಯಾರ್ಥಿಗಳು ಗಳಿಸಿದ ಅಂಕದ ಆಧಾರದ ಮೇಲೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಬೆಂಗಳೂರು ವಿವಿ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆ ಕಾಣೆಯಾಗಿತ್ತು ಎನ್ನಲಾಗುತ್ತಿದೆ. ಸುಮಾರು 115 ವಿಧ್ಯಾರ್ಥಿಗಳ ಉತ್ತರ ಪತ್ರಿಕೆಗಳು ಮಿಸ್ ಆಗಿದ್ದವು. ಇದರಲ್ಲಿ 95 ಪದವಿ ಹಾಗೂ 15 ಸ್ನಾತಕೋತ್ತರ ಪದವಿ ವಿಧ್ಯಾರ್ಥಿಗಳ ಉತ್ತರ ಪತ್ರಿಕೆ ಕಾಣೆಯಾಗಿದ್ವು. ಈಗ ಹತ್ತು ವರ್ಷಗಳ ಬಳಿಕ ವಿವಿ ಇತರ ವಿಷಯದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರಿಸಲ್ಟ್ ನೀಡಲು ನಿರ್ಧರಿಸಿದೆ.