BengaluruLifestyle

ಇನ್ನೂ ಮೂರು ದಿನ ಇರುತ್ತೆ ಮಳೆ; ಹೊರಗೆ ಹೋಗುವಾಗ ಎಚ್ಚರಿಕೆ ಇರಲಿ

ಬೆಂಗಳೂರು; ಮೋಚಾ ಚಂಡಮಾರುತ ಏರ್ಪಟ್ಟಿರುವುದರಿಂದ ಇವತ್ತೂ ಕೂಡಾ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ. ಇನ್ನೂ ಮೂರು ದಿನ ಮಳೆ ಇರಲಿದೆ. ಹೀಗಾಗಿ ವೀಕೆಂಡ್‌ ಎಂದು ಕುಟುಂಬ ಸಮೇತ ಹೊರಹೋಗುವವರು ಸ್ವಲ್ಪ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ಅದ್ರಲ್ಲೂ ನಾಳೆಯಿಂದ ಮೂರು ದಿನ ಮಳೆ ಜೋರಾಗಿಯೇ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಂಗಾಳಕೊಲ್ಲಿಯ ಆಗ್ನೇಯ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುತ್ತಿದ್ದು, ನಾಳೆ ಸೈಕ್ಲೋನ್‌ ಶುರುವಾಗಲಿದೆ. ಮೇ 9ರಂದು ಅದು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೇ 8 ರಿಂದ 12ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

Share Post