CrimeDistricts

ಸರ್ಕಾರಿ‌ ಕಾಲೇಜು ಉಪನ್ಯಾಸಕನಿಗೆ 100*100 ವಿಸ್ತೀರ್ಣದ ಕಾರು ಪಾರ್ಕಿಂಗ್ ಇದೆಯಂತೆ..!

ಮೈಸೂರು; ಲೋಕಾಯುಕ್ತ ಅಧಿಕಾರಿಗಳು ಇಂದು 13ಕ್ಕೂ ಹೆಚ್ಚು ಅಧಿಕಾರಿಗಳು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಹಲವು ಇಂಟ್ರೆಸ್ಟಿಂಗ್‌ ವಿಚಾರಗಳು ಬೆಳಕಿಗೆ ಬಂದಿವೆ. ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೂ ದಾಳಿ ಮಾಡಲಾಗಿದೆ. ಅಚ್ಚರಿಯ ವಿಚಾರ ಅಂದ್ರೆ ಉಪನ್ಯಾಸಕ ಮಹದೇವಸ್ವಾಮಿ ಅವರ ಕಾರುಗಳನ್ನು ನಿಲ್ಲಿಸೋದಕ್ಕಾಗಿ 100*100 ವಿಸ್ತೀರ್ಣದ ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಅಂತೆ. ಇದೊಂದನ್ನು ನೋಡಿದರೆ ಸಾಕು ಅವರ ಆಸ್ತಿ ಎಷ್ಟಿರಬಹುದು ಎಂದು ಲೆಕ್ಕ ಹಾಕೋದಕ್ಕೆ. 

ಹೆಸರಿಗೆ ಮಾತ್ರ ಸರ್ಕಾರಿ ಕಾಲೇಜು ಉಪನ್ಯಾಸಕನಾಗಿರುವ ಮಹದೇವಸ್ವಾಮಿ, ತಮ್ಮ ಕುಟುಂಬದವರ ಹೆಸರಿನಲ್ಲಿ MS Group ಕಂಪನಿ ನಡೆಸುತ್ತಾರೆ. ಹೀಗಾಗಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮಹದೇವಸ್ವಾಮಿ, ಹಲವಾರು ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಗುರುಕುಲ ವಿದ್ಯಾಸಂಸ್ಥೆ ನಡೆಸುತ್ತಾರೆ. ಸ್ಟೀಲ್‌, ಬಟ್ಟೆ ಅಂಗಡಿ ಕೂಡಾ ಮೈಸೂರಿನಲ್ಲಿದೆ. ಇನ್ನು ನಂಜನಗೂಡು ಹಾಗೂ ಕೆ.ಆರ್‌.ನಗರದಲ್ಲೂ ಸ್ಟೀಲ್‌ ಅಂಗಡಿ ಇದೆ. ಇವರು ತಮ್ಮ ಕಾರುಗಳನ್ನು ನಿಲ್ಲಿಸೋದಕ್ಕಾಗಿಯೇ 100*100 ಜಾಗ ಮಾಡಿಕೊಂಡಿದ್ದಾರಂತೆ.

 

Share Post