BengaluruCrime

ಹೆಚ್ಚಿದ ಚುನಾವಣಾ ಅಕ್ರಮ; ಬಿಜೆಪಿ ಮುಖಂಡನ ಮನೆಯಲ್ಲಿ ಕುಕ್ಕರ್‌ಗಳ ಜಪ್ತಿ

ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಅಕ್ರಮಗಳು ಜೋರಾಗುತ್ತಿವೆ. ಇದರ ಜೊತೆಗೆ ಅಧಿಕಾರಿಗಳು ಕೂಡಾ ಆಗಿಂದಾಗ್ಗೆ ದಾಳಿ ಮಾಡಿ ಅಕ್ರಮಗಳನ್ನು ತಡೆಯುತ್ತಿದ್ದಾರೆ. ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ದಾಳಿ ಮಾಡಲಾಗಿದ್ದು, ಮತದಾರರಿಗೆ ಹಂಚಲು ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಸಂಗ್ರಹಿಸಿದ್ದ ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಜೆಪಿ ಮುಖಂಡ ಅನಿಲ್‌ ಶೆಟ್ಟಿ ಎಂಬುವವರ ಮನೆಯಲ್ಲಿ ಸುಮಾರು 504 ಕುಕ್ಕರ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಕೋರಮಂಗಲ 4ನೇ ಹಂತದಲ್ಲಿ ಅನಿಲ್ ಶೆಟ್ಟಿ ಅವರ ಮನೆ ಇದೆ. ಮತದಾರರ ನೋಂದಣಾಧಿಕಾರಿ ವರಲಕ್ಷ್ಮಮ್ಮ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Share Post