BengaluruCrime

ಮಾಲ್‌ನಲ್ಲಿ ಯುವತಿ ಜೊತೆ ಅನುಚಿತ ವರ್ತನೆ; ಆರೋಪಿ ಗುರುತು ಪತ್ತೆ

ಬೆಂಗಳೂರು; ಕೆಲ ದಿನಗಳ ಹಿಂದೆ ಹರಿಯ ವಯಸ್ಸಿನ ವ್ಯಕ್ತಿಯೊಬ್ಬರು ಬೆಂಗಳೂರಿನ ಲುಲು ಮಾಲ್‌ನಲ್ಲಿ ಯುವತಿಯೊಬ್ಬಳಿಗೆ ಹಿಂದಿನಿಂದ ಬೇಕಂತಲೇ ಗುದ್ದಿ ವಿಕೃತ ಆನಂದ ಪಡೆದಿದ್ದರು. ಅದರ ವಿಡಿಯೋ ಸೆರೆಯಾಗಿತ್ತು. ಇದೀಗ ಪೊಲೀಸರು ಆ ಕಾಮುಕ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿದ್ದಾರೆ. 

ಆರೋಪಿಯನ್ನು ಅಶ್ವತ್ಥ್‌ ನಾರಾಯಣ್‌ ಎಂದು ಗುರುತಿಸಲಾಗಿದೆ. ಬಸವೇಶ್ವರ ನಗರ ನಿವಾಸಿಯಾಗಿರುವ ಇವರು, ಪ್ರತಿಷ್ಠಿಯ ಮಠವೊಂದಕ್ಕೆ ಸೇರಿದ್ದ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಅಶ್ವತ್ಥ್‌ ನಾರಾಯಣ್‌ ನಿವೃತ್ತರಾಗಿದ್ದರು ಎಂದು ತಿಳಿದುಬಂದಿದೆ. ಪೊಲೀಸರು ಅವರ ಮನೆ ಬಳಿ ಹೋಗಿದ್ದು, ಆದ್ರೆ ಬೀಗ ಹಾಕಿಕೊಂಡು ಅವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

3 ದಿನಗಳ ಹಿಂದೆ ಲುಲು ಮಾಲ್​ನಲ್ಲಿ ಯವತಿಯರು ಹಾಗೂ ಮಹಿಳೆಯರಿಗೆ ತಿಳಿಯದಂತೆ ಹಿಂದಿನಿಂದ ಗುದ್ದಿ ವಿಕೃತ ಆನಂದ ಪಡೆದಿದ್ದಾರೆ. ಈ ದೃಶ್ಯವನ್ನು ಯುವಕನೊಬ್ಬ ಚಿತ್ರೀಕರಿಸಿಕೊಂಡು ದೂರು ಕೊಟ್ಟಿದ್ದ. ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಇದರ ವಿಡಿಯೋ ವೈರಲ್‌ ಆಗಿತ್ತು.

 

Share Post