ಬೆಂಗಳೂರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ; ವೈದ್ಯರೊಬ್ಬರಿಗೆ ಪರಚಿದ ಚಿರತೆ
ಬೆಂಗಳೂರು; ಬೆಂಗಳೂರಿನ ಕೂಡ್ಲು ಸಮೀಪ ಕಳೆದ ಎರಡು ದಿನಗಳಿಂದ ಚಿರತೆಯೊಂದು ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸತತ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಶು ವೈದ್ಯ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಈ ವೇಳೆ ಚಿರತೆ ವೈದ್ಯರೊಬ್ಬರ ಕತ್ತಿಗೆ ಪರಚಿದೆ. ಟಾಸ್ಕ್‌ಫೋರ್ಸ್‌ನ ಮತ್ತೊಬ್ಬ ಸಿಬ್ಬಂದಿಗೂ ಗಾಯವಾಗಿದೆ. ಲೆಪರ್ಡ್ಸ್ ಟಾಸ್ಕ್‌ಫೋರ್ಸ್ ವಾಹನಕ್ಕೆ ಚಿರತೆಯನ್ನು ಶಿಫ್ಟ್ ಮಾಡಿ ಕೊಂಡೊಯ್ಯಲಾಯಿತು.
ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ಚಿರತೆ ಕಾಣಿಸಿಕೊಂಡಿತ್ತು. ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಇದನ್ನು ಗಮಿಸಿದ್ದರು. ಹೀಗಾಗಿ ಎರಡು ಬೋನುಗಳನ್ನಿಟ್ಟು ಚಿರತೆಗಾಗಿ ಸೆರೆಗಾಗಿ ಮೈಸೂರಿನಿಂದ ಬಂದಿದ್ದ ವಿಶೇಷ ತಂಡ ಕಾರ್ಯಾಚರಣೆಗೊಳಿದಿತ್ತು.