Hijab Row-ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಮುಂದುವರೆದ ಅರ್ಜಿ ವಿಚಾರಣೆ
ಬೆಂಗಳೂರು: ಹಿಜಾವ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಇಂದು ಕೂಡ ವಿಚಾರಣೆ ನಡೆಯುತ್ತಿದೆ. ಹಿಜಾಬ್ ಪರ/ವಿರೋಧ, ವಾದ/ಪ್ರತಿವಾದಗಳು ನಡೆಯುತ್ತಿವೆ. ಸಿಜೆ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುನುದ್ದೀನ್ ಅವರಿಂದ ವಿಚಾರಣೆ ನಡೆಯುತ್ತಿದೆ.
ಅರ್ಜಿದಾರರ ಪರ ತಾಹೀರ್ ವಾದ:
ನಾನೇ ಪ್ರಕರಣದಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದೇನೆ ಎಂದು ಅರ್ಜಿದಾರರ ಪರ ತಾಹೀರ್ ವಾದ
ಸಿಜೆ: ನೀವು ಈ ಸಂಬಂಧ ಯಾವುದೇ ಅರ್ಜಿ ಸಲ್ಲಿಸಿಲ್ಲ..ಸೂಕ್ತವಾದ ಅರ್ಜಿ ಸಲ್ಲಿಸಲು ಸಿಜೆ ಸಲಹೆ. ಉರ್ದು ಶಾಲೆಗಳಲ್ಲೂ ಹಿಜಾಬ್‌ಗೆ ಅವಕಾಶ ನೀಡ್ತಿಲ್ಲ. ವಕೀಲರಾಗಿ ನೀವೇ ಹೇಗೆ ಅರ್ಜಿ ಸಲ್ಲಿಸುತ್ತೀರಿ..? ಇದು ವೃತ್ತಿಗೆ ದುರ್ನಡತೆಯಾಗಲಿದೆ. ಎಂದು ಸಿಜೆ ಸಲಹೆ.
ಎಜಿ ನಾವದಗಿ:
ತಾಹೀರ್ ವಾದಕ್ಕೆ ಅಡ್ವೊಕೇಟ್ ಜನರಲ್ ಆಕ್ಷೇಪ. ಸೂಕ್ತ ಅರ್ಜಿ ಸಲ್ಲಿಸದೆ ವಾದ ಮಾಡುವುದ ಸರಿಯಲ್ಲ.
ದೇವದತ್ ಕಾಮತ್:
ಕನ್ನಡದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಅಂತ ಇದೆ. ಪಬ್ಲಿಕ್ ಆರ್ಡರ್ ಎಂದ್ರೆ ಸಾರ್ವಜನಿಕ ಸುವ್ಯವಸ್ಥೆ ಎಂದರ್ಥ. 25(1)ವಿಧಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದಿದೆ. ಅದೇ ಅರ್ಥವನ್ನು ಸರ್ಕಾರಿ ಆದೇಶದಲ್ಲೂ ಅರ್ಥೈಸಬೇಕು.ಸರ್ದಾರ್ ಸಹೀದ್ನಾ ಸೈಪುದ್ದೀನ್ ಪ್ರಕರಣ ಉಲ್ಲೇಖಿಸಿದ ದೇವದತ್ ಕಾಮತ್ ಬುಹ್ರಾ ಸಮುದಾಯದ ಸಂಪ್ರದಾಯಕ್ಕೆ ಸಂಬಂಧಿಸಿದ ವಿಚಾರ. ಸಮುದಾಯದ ಮುಖ್ಯಸ್ಥ ಬೇರೆ ವ್ಯಕ್ತಿಗಳನ್ನು ಹೊರಗಿಡಲು ಅವಕಾಶ ಇತ್ತು. ಬಾಂಬೆ ಸರ್ಕಾರ ಇದನ್ನು ಪ್ರತಿಬಂಧಿಸಿ ಆದೇಶ ಹೊರಡಿಸಿತ್ತು.ಆದೇಶ ಪ್ರಶ್ನಿಸಿ ಹಲವು ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಅರ್ಕಾರದ ಆದೇಶವನ್ನ ರದ್ದುಪಡಿಸಿತ್ತು. ಧರ್ಮದ ಅತ್ಯಗತ್ಯ ಭಾಗವಾಗಿದ್ದರೆ 25(1)ಉಲ್ಲಂಘನೆಯಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಸುವ್ಯವಸ್ಥೆ ಅಡಿ ಸರ್ಕಾರಕ್ಕೆ ಪರಮಾಧಿಕಾರವಿಲ್ಲ ಎಂದು ಕೋರ್ಟ್ ಹೇಳಿತ್ತು. ದೇವದಾಸಿ ಪದ್ಧತಿ, ನರಬಲಿ, ಸತಿ ಪದ್ಧತಿ ಇಂತವುಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ ಧರ್ಮದಲ್ಲಿ ಕಡ್ಡಾಯ ಆಚರಣೆಗಳನ್ನು ನಿರ್ಬಂಧ ಮಾಡಲಾಗದು. ಕೆಲ ವಕೀಲರು ಹಣೆಯಲ್ಲಿ ನಾಮ ಇಡುತ್ತಾರೆ. ಇದನ್ನು ಧಾರ್ಮಿಕ ಆಚರಣೆ ಎನ್ನುವುದಕ್ಕಿಂತ ವೈಕ್ತಿಕ ವಿಶ್ವಾಸ ಎನ್ನಬಹುದು. ಸಂವಿಧಾನ ರಚನಕಾರರು ಆತ್ಮವಿಸಾಕ್ಷಿಯ ಸ್ವಾತಂತ್ರ್ಯವನ್ನೂ ಗುರುತಿಸಿದ್ದಾರೆ. ಶಿಕ್ಷಣ ಕಾಯ್ದೆ ಆಧಿರಿಸಿ ಇನ್ನೊಬ್ಬರ ವೈಯಕ್ತಿಕ ಹಕ್ಕನ್ನು ಕಿತ್ತುಕೊಳ್ಳಲಾಗದು.
ಸಿಜೆ: ನೀವು ಶಿಕ್ಷಣ ಕಾಯ್ದೆಯನ್ನು ಅರ್ಜಿಯಲ್ಲಿ ಉಲ್ಲೇಖ ಮಾಡಿಲ್ಲ.ಸಂವಿಧಾನ ರಚನಕಾರರು ಸ್ವಾತಂತ್ರ್ಯವನ್ನು ಉಲ್ಲೇಖಿಸಿದ್ದಾರೆ.
ಕಾಮತ್: ಶಿಕ್ಷಣ ಕಾಯ್ದೆ ಜಾರಿಗೆ ಬಂದಿರುವುದು ಹಿಜಾಬ್ ಅಥವಾ ಯಾವುದೇ ಧಾರ್ಮಿಕ ಆಚರಣೆಯ ನಿರ್ಬಂಧಕ್ಕಲ್ಲ ನಾನು ಶಾಲೆಗೆ ಹೋಗುವಾಗ ರುದ್ರಾಕ್ಷಿ ಧರಿಸುತ್ತಿದ್ದೆ, ಇದು ನನ್ನ ಧಾರ್ಮಿಕ ಗುರುತಿನ ಪ್ರದರ್ಶನವಾಗಿರಲಿಲ್ಲ. ಕೆಲವು ಸಂಪ್ರದಾಯಗಳನ್ನು ವೇಧ ಉಪನಿಷತ್‌ಗಳಲ್ಲಿ ಉಲ್ಲೇಖಿಸಿರಬಹುದು. ಅಂತಹ ಸಂಪ್ರದಾಯಗಳನ್ನೂ ಕೋರ್ಟ್ ರಕ್ಷಿಸಬೇಕು. ಹಾಗೆಯೇ ಹಿಜಾಬ್ ಧರಿಸುವವರನ್ನು ದಂಡಿಸಬಾರದು, ಹಿಜಾಬ್ ಧರಿಸುವ ಸಂಪ್ರದಾಯವಿದ್ದರೆ ಅನುಮತಿ ನೀಡಬೇಕು. ನಾವೆಲ್ಲರೂ ಒಂದೇ ಶಕ್ತಿಯ ಪ್ರತಿನಿಧಿಗಳಾಗಿದ್ದೇವೆ. ವೇದ-ಉಪನಿಷತ್‌ನಲ್ಲಿಯೂ ಇದನ್ನೇ ಹೇಳಿದ್ದಾರೆ. ಮೂಗುಬೊಟ್ಟು ಧರ್ಮದ ಪ್ರತೀಕ ಅಲ್ಲದಿರಬಹುದು ಆದರೆ ದ.ಭಾರತದ ತಮಿಳು ಹಿಂದೂ ಸಂಸ್ಕೃತಿಯ ಪ್ರತೀಕ. ಹೀಗಾಗಿ ಸಂಸ್ಕೃತಿ ಧರ್ಮದ ಒಂದು ಭಾಗವೆಂದು ಪರಿಗಣಿಸಲಾಗಿತ್ತು.
ಮೂಗುಬೊಟ್ಟು ಆಕೆ ಪಾಲಿನ ನಂಬಿಕೆ ಆಚರಣೆ ಆಗಿರಬಹುದು ಅದನ್ನೂ ನಾವು ಪರಿಗಣಿಸಬೇಕೆಂದು ಅಲ್ಲಿನ ಕೋರ್ಟ್ ಹೇಳಿತ್ತು. ಬಿಜಾಯ್ ಇಮ್ಯಾನುಯಲ್ ಪ್ರಕರಣದಲ್ಲೂ ಸುಪ್ರೀಂಕೋರ್ಟ್ ಇದೇ ಹೇಳಿತ್ತು. ಎಷ್ಟರಮಟ್ಟಿಗೆ ಆ ಆಚರಣೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಅದು ನಂಬಿಕೆ ಇಟ್ಟವನ ವಿಶ್ವಾಸವನ್ನು ಅವಲಂಬಿಸಿದೆ. ಶಾಲೆಯಲ್ಲಿ ಶಿಸ್ತು, ನಿಯಮ ಪಾಲನೆಗೆ ಪ್ರಾಮುಖ್ಯತೆ ಇದೆ. ಮೂಗುಬಟ್ಟು ಧರಿಸುವುದರಿಂದ ಅದಕ್ಕೆ ಧಕ್ಕೆಯಾಗುವುದಿಲ್ಲ ಧಾರ್ಮಿಕ ಸಾಂಸ್ಕೃತಿಕ ಆಚರಣೆಗೆ ವಿನಾಯ್ತಿ ನೀಡಿದ್ರೆ ತಪ್ಪಾಗಲ್ಲ. ಹೆಚ್ಚುವರಿ ವಸ್ತ್ರದಿಂದ ಶಾಲಾ ಸಮವಸ್ತ್ರಕ್ಕೆ ನೀತಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ತಲೆಮೇಲೆ ಹಾಕುವ ಬಟ್ಟೆಗೆ ಮಾತ್ರ ಅನುಮತಿ ಕೇಳಿದ್ದೇವೆ. ಮೂಗುತಿಗೆ ಅನುಮತಿ ನೀಡಿದ್ರೆ ವೈವಿಧ್ಯತೆ ಹೆಚ್ಚುತ್ತದೆ. ಮಕ್ಕಳು ವೈವಿದೈತೆಯ ಸಂಸ್ಕೃತಿ ಅರ್ಥೈಸಲು ಅನುಕೂಲವಾಗುತ್ತದೆ.
ಸಿಜೆ-ಹತ್ತು ನಿಮಿಷದಲ್ಲಿ ವಾದ ಮುಗಿಸುತ್ತೇನೆ ಎಂದಿದ್ರಿ..ಇನ್ನೂ ಅರ್ಧ ಡಜನ್ ವಕೀಲರು ವಾದ ಮಂಡಿಸಬೇಕಿದೆ.
ನಾನು ಶೀಘ್ರದಲ್ಲಿ ವಾದ ಮಂಡನೆ ಮಾಡ್ತೀನಿ..ನನ್ನ ಅವಲಂಬಿಸಿರುವ ಪಟ್ಟಿಯನ್ನು ಕೋರ್ಟ್‌ಗೆ ನೀಡುತ್ತೇನೆ. ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಸಾರ್ವಜನಿಕ ಹಕ್ಕುಗಳನ್ನು ದಮನಿಸಬಾರದು. ಅರ್ಜಿದಾರರ ಪರ ದೇವದತ್ ಕಾಮತ್ ವಾದ ನಾನು ನನ್ನ ಲಿಖಿತ ವಾದ ಮಂಡನೆಯನ್ನೂ ಕಳಿಸಿಕೊಡುತ್ತೇನೆ. ನಮ್ಮ ಜಾತ್ಯಾತೀತತೆ ಟರ್ಕಿಯ ಜಾತ್ಯಾತೀತತೆ ಅಲ್ಲ. ಸರ್ವಧರ್ಮಗಳ ಸಮನ್ವಯ ಭಾವದ ಉಲ್ಲೇಖವಿದೆ. ಮತ್ತೊಂದು ಧರ್ಮದವರನ್ನು ಅರ್ಥ ಮಾಡಿಕೊಳ್ಳಬೇಕು ಜೊತೆಗೆ ಹಿಜಾಬ್ ಧರಿಸಲೂ ಅನುಮತಿ ನೀಡಬೇಕು.ಹಿಂದೂ ಮುಸ್ಲಿಂರನ್ನು ಪ್ರತ್ಯೇಕವಾಗಿಸುವುದು ತುಂಬಾ ತಪ್ಪಾಗುತ್ತದೆ. ಹಿಂದೂ-ಮುಸ್ಲಿಂ ಪ್ರತ್ಯೇಕ ಬಹಳ ತಪ್ಪು. ಹೆಚ್ಚುವರಿ ವಸ್ತ್ರ ಧಾರಣೆಯಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ. ಹಿಜಾಬ್ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಅಮಾನತು ಮಾಡುವುದು ಸರಿಯಲ್ಲ, ಹಿಜಾಬ್ ಧರಿಸಲು ಅನುಮತಿ ನೀಡಬೇಕು ಮಧ್ಯಂತರ ಆದೇಶ ಮುಂದುವರಿಸಬಾರದು ಎಂದ ದೇವದತ್ ಕಾಮತ್ ತಮ್ಮ ವಾದ ಮಂಡಿಸಿದ್ದಾರೆ.