Bengaluru

ಏಪ್ರಿಲ್‌ 16ರಿಂದ ದ್ವಿತೀಯ ಪಿಯು ಪರೀಕ್ಷೆ

ಬೆಂಗಳೂರು : ಪಿಯುಸಿ ಪರೀಕ್ಷೆ ವೇಳಾಪಟ್ಟಿಯನ್ನು ಪಿಯು ಬೋರ್ಡ್‌ ಬಿಡುಗಡೆ ಮಾಡಿದೆ. ದ್ವಿತೀಯ ಪಿಯುಸಿ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಯ ವೇಳಾ ಪಟ್ಟಿ ಈಗ ಬಿಡುಗಡೆ ಮಾಡಲಾಗಿದೆ.

ದ್ವಿತೀಯ ಪಿಯುಸಿಯ ಪ್ರಾಯೋಗಿಕ ಪರೀಕ್ಷೆ ಫೆಬ್ರವರಿ 17 ರಿಂದ ಮಾರ್ಚ್ 25 ವರೆಗೆ ನಡೆಯಲಿದೆ. ಇನ್ನು ಲಿಖಿತ ಪರೀಕ್ಷೆಗಳಿಗೆ ಏಪ್ರಿಲ್ 16 ರಿಂದ ಮೇ 4 ವರೆಗೆ ಸಮಯ ನಿಗದಿ ಮಾಡಲಾಗಿದೆ. ಇದು ತಾತ್ಕಾಲಿಕ ವೇಳಾಪಟ್ಟಿ ಆಗಿದ್ದು ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 1 ವರೆಗೆ ಅವಕಾಶ ನೀಡಲಾಗಿದೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಾಷಾ ವಿಷಯಕ್ಕೆ ಶೇ.70ರಷ್ಟು ಪಠ್ಯದಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ, ಐಚ್ಛಿಕ ವಿಷಯಗಳಲ್ಲಿ ಶೇ.100ರಷ್ಟು ಪಠ್ಯದಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪಿಯುಸಿ ಬೋರ್ಡ್‌ ತಿಳಿಸಿದೆ.

ಇನ್ನು ಪ್ರಥಮ ಪಿಯುಸಿ ಪರೀಕ್ಷೆಗೆ ಮಾರ್ಚ್ 28 ರಿಂದ ಏಪ್ರಿಲ್ 13 ರವರೆಗೆ ನಡೆಯಲಿದೆ. ಇಲ್ಲಿಯೂ ದ್ವಿತೀಯ ಪಿಯು ಪರೀಕ್ಷೆ ರೀತಿಯೇ ಭಾಷಾ ವಿಷಯದಲ್ಲಿ ಶೇ.70ರಷ್ಟು ಪಠ್ಯಕ್ಕೆ ಪರೀಕ್ಷೆ, ಇನ್ನು ಐಚ್ಛಿಕ ವಿಷಯದಲ್ಲಿ ಶೇ 100ರಷ್ಟು ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ.

Share Post