BengaluruEconomyLifestyle

ಸೂಪರ್‌ ಮಾರ್ಕೆಟ್‌ನಲ್ಲಿ ಖರ್ಚು ಹೇಗೆ ಕಡಿಮೆ ಮಾಡಿಕೊಳ್ಳುವುದು..?; ನಿಮಗೆ 5 ಸಲಹೆಗಳು..!

ಬೆಂಗಳೂರು; ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ಪರದಾಡುತ್ತಿದ್ದಾರೆ. ಅದರಲ್ಲೂ ಮಾಲ್‌ ಸಂಸ್ಕೃತಿ ಜನರನ್ನು ಕೊಳ್ಳುಬಾಕರನ್ನಾಗಿ ಮಾಡಿದೆ. ಇಂತಹ ಸಂದರ್ಭದಲ್ಲಿ ನಾವು ಮಾಲ್‌ನಲ್ಲಿ ಕೊಳ್ಳುವ ಮೊದಲು ಒಂದಷ್ಟು ಯೋಚನೆ ಮಾಡಿದರೆ ಹೆಚ್ಚು ಖರ್ಚಿನಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ, ಮಾಲ್‌, ಸೂಪರ್‌ ಮಾರ್ಕೆಟ್‌ನಲ್ಲಿ ಖರೀದಿ ಮಾಡಲು ಹೋದಾಗ ಈ ಕೆಳಗಿನ ಕೆಲ ಸಲಹೆಗನ್ನು ಅನುಸರಿಸಿದರೆ ಉತ್ತಮ.

1. ಮನೆಯಲ್ಲಿ ಏನಿದೆ ಎಂಬುದರ ಬಗ್ಗೆ ನಿಗಾ ಇರಿಸಿ
ಶಾಪಿಂಗ್‌ಗೆ ಹೋಗುವ ಮೊದಲು, ನಮ್ಮ ಮನೆಯಲ್ಲಿ ನಿಜವಾಗಿ ಏನೇನಿದೆ ಎಂಬುದನ್ನು ಮೊದಲು ಪಟ್ಟಿ ಮಾಡಬೇಕು. ಇಂದಾಗಿ ಶಾಪಿಂಗ್‌ ವೇಳೆ ಮತ್ತದೇ ವಸ್ತುವನ್ನು ಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು. ಇದಾಹರಣೆಗೆ ನಮ್ಮ ಮನೆಯಲ್ಲಿ ಇನ್ನೂ ಅಕ್ಕಿ ಇದೆ ಅಂದುಕೊಳ್ಳೋಣ. ಅದನ್ನು ನೋಡದೇ ಶಾಪಿಂಗ್‌ಗೆ ಹೋಗಿ ಮತ್ತೆ ಅಕ್ಕಿ ಖರೀದಿ ಮಾಡುವುದು ತಪ್ಪಾಗುತ್ತದೆ. ಯಾಕಂದ್ರೆ ಅಕ್ಕಿ ಹೆಚ್ಚು ದಿನ ಇದ್ದರೆ ಅದಕ್ಕೆ ಹುಳ ಬಿದ್ದು ಹಾಳಾಗಬಹುದು.

2. ಕಡಿಮೆ ಖರೀದಿಸಲು ಪ್ರಯತ್ನಿಸಿ
ಶಾಪಿಂಗ್‌ಗೆ ಹೋಗುವಾಗ ಕಡಿಮೆ ಖರೀದಿಸಲು ಪ್ರಯತ್ನಿಸಬೇಕು. ಮೊದಲೇ ಯಾವ ವಸ್ತುಗಳು ಬೇಕು ಎಂದು ಲಿಸ್ಟ್‌ ಮಾಡಿಕೊಂಡು ಹೋಗಿ, ಆ ವಸ್ತು ತೆಗೆದು ಬುಟ್ಟಿಗೆ ಹಾಕಿಕೊಂಡ ತಕ್ಷಣ ಅದಕ್ಕೆ ಟಿಕ್‌ ಮಾರ್ಕ್‌ ಹಾಕಿಕೊಳ್ಳಬೇಕು. ಜೊತೆಗೆ ಶಾಪಿಂಗ್‌ ಮಾಡುವಾಗ ನಮ್ಮ ಲಿಸ್ಟ್‌ನಲ್ಲಿ ಯಾವ ವಸ್ತುವಿದೆ. ಅದು ಎಲ್ಲಿದೆ ಎಂದಷ್ಟೇ ಹುಡುಕಿ. ಬೇರೆ ವಸ್ತುಗಳ ಕಡೆ ಗಮನಹರಿಸಿಬೇಡಿ. ಆಗ ಅತಿಅಗತ್ಯ ವಸ್ತುಗಳನ್ನಷ್ಟೇ ಖರೀದಿ ಮಾಡುತ್ತೀರಿ. ಹೆಚ್ಚು ವಸ್ತುಗಳನ್ನು ಖರೀದಿ ಮಾಡುವುದನ್ನು ತಪ್ಪಿಸುತ್ತೀರಿ.

3. ಫ್ರಿಜ್ ಅನ್ನು ಉತ್ತಮವಾಗಿ ಬಳಸಿಕೊಳ್ಳಿ

ಮನೆಯಲ್ಲಿನ ಫ್ರಿಡ್ಜ್‌ ಸರಿಯಾಗಿ ಬಳಸಿಕೊಂಡರೆ, ನಾವು ಅದರಲ್ಲಿಟ್ಟ ವಸ್ತುಗಳನ್ನು ಹೆಚ್ಚು ಕಾಲ ಇರಿಸಬಹುದು. ಬೇಗ ವಸ್ತುಗಳನ್ನು ಕೆಡದಂತೆ ಜಾಗ್ರತೆ ವಹಿಸಬಹುದು. ಹಾಗೆ ಮಾಡುವುದರಿಂದ ನಮಗೆ ಆಗುವ ನಷ್ಟ ತಪ್ಪುತ್ತದೆ. ಫ್ರಿಡ್ಜ್‌ನಲ್ಲಿಟ್ಟು ಹಲವು ದಿನಗಳವರೆಗೆ ಉಪಯೋಗಿಸಬಹುದಾದ ವಸ್ತುಗಳು ಕಡಿಮೆ ದರಕ್ಕೆ ಸಿಕ್ಕಾಗ ಹೆಚ್ಚು ತಂದು ಇಟ್ಟುಕೊಂಡರೆ ಉತ್ತಮ.

4. ಪ್ಯಾಕೇಜಿಂಗ್ ಅನ್ನು ಅರ್ಥಮಾಡಿಕೊಳ್ಳಿ
“ನಮ್ಮ ಮಾರುಕಟ್ಟೆಗಳಲ್ಲಿ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳನ್ನು ಅವರ ಅನುಕೂಲಕ್ಕಾಗಿ ಪ್ಯಾಕ್ ಮಾಡಲಾಗುತ್ತದೆ. ಹೀಗಾಗಿ ಅದನ್ನು ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.

5. ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ
ಸ್ಥಳೀಯವಾಗಿ ಲಭ್ಯವಿರುವ ಚಿಲ್ಲರೆ ವ್ಯಾಪಾರಿಗಳಿಂದ ಹಿಡಿದು ವರ್ಷಗಳ ಅನುಭವ ಹೊಂದಿರುವ ತಜ್ಞರವರೆಗೆ, ನೀವು ಹೆಚ್ಚು ದಿನಗಳವರೆಗೆ ಆಹಾರವನ್ನು ಹೇಗೆ ಸಂಗ್ರಹಿಸುತ್ತೀರಿ? ಎಂದು ತಜ್ಞರಿಂದ ಸಲಹೆ ಪಡೆದುಕೊಳ್ಳಬೇಕು.

 

Share Post