Hijab Row: ವಾದ ಮಂಡನೆಗೆ ಇನ್ನೊಂದೇ ದಿನ ಅವಕಾಶ -ನಾಳೆಗೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಸಮವಸ್ತ್ರ ನೀತಿ ವಿಚಾರವಾಗಿ ರಾಜ್ಯದಲ್ಲಿ ಭುಗಿಲೆದ್ದ ಗೊಂದಲಗಳು ಹೈಕೋರ್ಟ್ ಮೆಟ್ಟಿಲೇರಿತ್ತು ಅದರಂತೆ ಹಿಜಾಬ್ ವಿವಾದ ರಿಟ್ ಅರ್ಜಿ ವಿಚಾರಣೆ ಕಳೆದ 20ದಿನಗಳಿಂದ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಪ್ರತಿದಿನ ವಾದ/ಪ್ರತಿವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ ಪೀಠ ಇಂದು ಪ್ರಮುಖ ಘೋಷಣೆಯನ್ನು ತಿಳಿಸಿದೆ. ವಾದ ಮಂಡನೆ ಮಾಡಲು ಒಂದು ದಿನ ಮಾತ್ರ ಅವಕಾಶ ನೀಡಿದೆ. ನಾಳೆ ಅಂತಿಮವಾಗಿ ವಾದ ಮಂಡಿಸಲು ವಕೀಲರಿಗೆ ಸೂಚನೆ ನೀಡಿದೆ.
ಪ್ರತಿದಿನ ವಾದ/ಪ್ರತಿವಾದಗಳನ್ನು ಪರಿಶೀಲಿಸಿದ್ದೇವೆ. ನಾಳೆಯೊಳಗೆ ನಿಮ್ಮ ವಾದಗಳನ್ನ ಮಂಡಿಸುವಂತೆ ಹೈಕೋರ್ಟ್ ತ್ರಿಸದಸ್ಯ ಪೀಠ ಗಡುವು ನೀಡಿದೆ. ಈಗಾಗಲೇ ಅರ್ಜಿ ಪರ ವಕೀಲರು ಹಾಗೂ ಸರ್ಕಾರ ಪರ ವಕೀಲರು ಕೋರ್ಟ್‌ಗೆ ತಮ್ಮ ತಮ್ಮ ನಿಲುವುಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಶೈಕ್ಷಣಿಕ ವರ್ಷ ಅಂತ್ಯವಾಗುತ್ತಿರುವ ಹಿನ್ನೆಲೆ ಆದಷ್ಟು ಬೇಹ ತೀರ್ಪು ನೀಡುವ ಉದ್ದೇಶದಿಂದ ನಾಳೆಗೆ ವಾದ ಮಂಡನೆಗೆ ಅವಕಾಶ ನೀಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣದೀಕ್ಷಿತ್, ನ್ಯಾ, ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ತ್ರಿಸದಸ್ಯ ಪೀಠ ನಾಳೆಗೆ ವಿಚಾರನೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.