Bengaluru

Hijab Row: ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ಹಿಜಾಬ್‌ ಅರ್ಜಿ ವಿಚಾರಣೆ: ಸರ್ಕಾರದ ಪರ ವಾದ

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿವಾದ ಕುರಿತ ಅರ್ಜಿ ವಿಚಾರಣೆ ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ಕೈಗೆತ್ತಿಕೊಂಡಿದೆ. ಇಂದು ಸರ್ಕಾರಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ವಕೀಲ ಎ.ಜಿ.ನಾವದಗಿ ಹಾಗೂ ಹಿರಿಯ ವಕೀಲ ಎ.ಎಂ.ಧರ್‌ ವಾದ ಮಂಡನೆ ಮಾಡಲಿದ್ದಾರೆ. ಇಂದಾದ್ರೂ ವಿವಾದ ಕುರಿತು ಹೈಕೋರ್ಟ್‌ ತೀರ್ಪು ನೀಡುತ್ತಾ ಎಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸರ್ಕಾರ ಎದುರು ನೋಡುತ್ತಿದೆ.

ಈಗಾಗಲೇ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದು, ಇಂದು ಸರ್ಕಾರ ಪರ ವಾದ ಮಂಡಿಸಲು ವಕೀಲರಿಗೆ ನ್ಯಾಯಾಲಯ ಅನುಮತಿ ನೀಡಿದೆ.

ರವಿವರ್ಮ ಕುಮಾರ್‌
ರಾಜ್ಯಾದ್ಯಂತ ಯೂಟ್ಯೂಬ್‌ನಿಂದ ಸಮಸ್ಯೆ ಆಗುತ್ತಿದೆ. ಯೂಟ್ಯೂಬ್‌ ಲೈವ್‌ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಅರ್ಜಿದಾರರ ಪರ ವಕೀಲ ಮನವಿ. ದುಪ್ಪಟಾವನ್ನು ಹಿಜಾಬ್‌ ನಂತರ ಬಳಸಲು ಕೋರಿದ್ದಾರೆ. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಜಿ.ಆರ್.ಮೋಹನ್‌
ಸರ್ಕಾರಿ ಸಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿರ್ಬಂಧಿಸಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ ರಕ್ಷಣೆ ಇದೆ. ಇಂತಹ ಕಾಲೇಜುಗಳಿಗೆ ಈ ಆದೇಶ ಅನ್ವಯ ಆಗಬಾರದು.
ಸಿಜೆ
ರಿಟ್‌ ಅರ್ಜಿ ಸಲ್ಲಿಸಲು ಒಕ್ಕೂಟ ಅನುಮತಿ ಇದೆಯೇ..? ಅನುಮತಿ ನೀಡದೆ ಹೇಗೆ ರಿಟ್‌ ಅರ್ಜಿ ಸಲ್ಲಿಸಿದ್ರಿ..?ವಕೀಲರಿಗೆ ಸಿಜೆ ಪ್ರಶ್ನೆ, ಈ ರೀತಿ ಅರ್ಜಿ ಸಲ್ಲಿಸುವುದು ಆಘಾತಕಾರಿ ವಿಚಾರ. ಒಕ್ಕೂಟದ ಬೈಲಾ, ಅಧಿಕಾರ ನಿರ್ಣಯವನ್ನು ಕೋರ್ಟ್‌ಗೆ ಸಲ್ಲಿಸಿ. ಸೋಮಾವಾರ ಅರ್ಜಿ ಸಲ್ಲಿಸುವುದಾಗಿ ವಕೀಲರ ಉತ್ತರ
ಪ್ರಭುಲಿಂಗ ನಾವದಗಿ
ಪ್ರತಿವಾದಿ 1ರಿಂದ 4ರ ಪರವಾಗಿ ನಾನು ವಾದ ಮಂಡಿಸುತ್ತೇನೆ ಎಂದು ಪ್ರಭುಲಿಂಗ ನಾವದಗಿ ವಾದ ಮಂಡನೆ. ಹಿಜಾಬ್‌ ಇಸ್ಲಾಂನ ಅತ್ಯಗತ್ಯ ಆಚರಣೆ ಅಲ್ಲ ಇದು ಸರ್ಕಾರದ ನಿಲುವು. ಅದರ ನಿರ್ಬಂಧ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆ ಆಗಲ್ಲ. ಶಬರಿ ಮಲೆ, ಶಾಯಿರಾ ಬಾನು ಕೇಸ್‌ ಅನ್ನು ಆಧರಿಸಬೇಕು. ಸಂವಿಧಾನದ ಅಡಿ ನೈತಿಕವಾಗಿ, ಗೌರವಯುತವಾಗಿ ವೈಯಕ್ತಿಕವಾಗಿ ಅತ್ಯಗತ್ಯ ಇದೆಯೇ ಎಂಬುದನ್ನು ನಿರ್ಧಾರ ಮಾಡಬೇಕು.
ಸಿಜೆ: ಸರ್ಕಾರದ ಆದೇಶದ ಹಿಂದಿನ ಉದ್ದೇಶವೇನು..?
ಕಾಲೇಜು ಅಭಿವೃದ್ಧಿ ಸಮಿತಿ 2013ರಲ್ಲೇ ಸಮವಸ್ತ್ರ ನಿರ್ಣಯವನ್ನು ಅಂಗೀಕರಿಸಲಾಗಿದೆ. ಸಿಜೆ ಪ್ರಶ್ನೆಗೆ ನಾವದಗಿ ಉತ್ತರ..ಉಡುಪಿ ಕಾಲೇಜಿನ ಅಭಿವೃದ್ದಿ ಸಮಿತಿ ಅಂಗೀಕರಿಸಿದೆ.
ಕೃಷ್ಣ ದೀಕ್ಷಿತ್:‌ ಸಿಡಿಸಿಗೆ ಕಾನೂನಿನ ಮಾನ್ಯತೆ ಇದೆಯೇ..?
ಕಾಲೇಜು ಅಭಿವೃದ್ಧಿ ಸಮಿತಿಗೆ ಮಾನ್ಯತೆ ಇದೆ ಎಂದ ನಾವದಗಿ ಆದೇಶ ಹೊರಡಿಸಿರುವ ಕಾರಣವನ್ನು ನಾನು ವಿವರಿಸುತ್ತೇನೆ. ಸಿಡಿಸಿಯಲ್ಲಿ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ. ಶಾಸಕರಲ್ಲದೆ, ಉಪನ್ಯಾಸಕರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ/ಪಂಗಡಗಳ ಸದಸ್ಯರು ಇರುತ್ತಾರೆ. 2018ರಲ್ಲಿ ಹೆಣ್ಣುಮಕ್ಕಳಿಗೆ ಸಮವಸ್ತ್ರ ಸಂಹಿತೆ ರೂಪಿಸಿದೆ. 2021ರವರೆಗೆ ಕಾಲೇಜಿನಲ್ಲಿ ಸಮಸ್ಯೆ ಇರಲಿಲ್ಲ. ಕೆಲವರು ಹಿಜಾಬ್‌ ಧರಿಸಿ ಬರುವುದಾಗಿ ಪ್ರಿನ್ಸಿಪಾಲ್‌ಗೆ ಹೇಳಿದ್ರು. ಬಳಿಕ ಸಿಡಿಸಿ ಸಭೆ ಸೇರಿ ಸಮವಸ್ತ್ರ ಸಂಹಿತೆ ರೂಪಿಸಿದೆ. ಇದಕ್ಕೆ ವಿದ್ಯಾರ್ಥಿನಿಯರು, ಪೋಷಕರು ವಿರೋಧ ಮಾಡಿದ್ರು ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಿ ಉನ್ನತ ಮಟ್ಟದ ಸಮಿತಿ ರಚಿಸಿ ಸಮವಸ್ತ್ರ ಮಾತ್ರ ಧರಿಸುವಂತೆ ಸೂಚನೆ ನೀಡಲಾಯ್ತು.

Share Post