Bengaluru

ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ಹಿಜಾಬ್‌ ಅರ್ಜಿ ವಿಚಾರಣೆ-ಸರ್ಕಾರ ಪರ ವಕೀಲರ ವಾದ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದ ಬಗೆಹರಿಯುತ್ತಿಲ್ಲ. ದಿನಕಳೆದಂತೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಬಿಂದಿ ಬಳೆ ಬಗ್ಗೆ ಇಸ್ಲಾಂ ವಿದ್ಯಾರ್ಥಿನಿಯರು ಮಾತನಾಡಿದ್ದಕ್ಕೆ ಇದೀಗ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇತ್ತ ಹೈಕೋರ್ಟ್‌ನಲ್ಲಿ ಇಂದು ಕೂಡ ಹಿಜಾಬ್‌ ವಿಚಾರಣೆ ಮುಂದುವರೆದಿದೆ. ಸರ್ಕಾರದ ಪರ ವಕೀಲ ರವಿವವರ್ಮ ಕುಮಾರ್‌ ವಾದ ಮಂಡಿಸಿದ್ದಾರೆ. ಉಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠದಲ್ಲಿ ಹಿಜಾಬ್‌ ಅರ್ಜಿ ವಿಚಾರಣೆ ನಡೆಯುತ್ತಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್‌,  ನ್ಯಾ, ಜೆ.ಎಂ.ಖಾಜಿ ಎವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸುತ್ತಿದೆ. ಇಂದಾದ್ರೂ ತೀರ್ಪು ಬರುತ್ತಾ ಕಾದು ನೋಡಬೇಕಿದೆ.

Share Post