ರಾಮಮಂದಿರ ಉದ್ಘಾಟನೆ ದಿನ ರಾಜ್ಯದಲ್ಲಿ ಹೈ ಅಲರ್ಟ್; ಇದೆಲ್ಲಾ ಮಾಡೋಂಗಿಲ್ಲ!
ಬೆಂಗಳೂರು; ಜನವರಿ 22 ರಂದು ಅಯೋಧ್ಯೆ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಅಯೋಧ್ಯೆ ರಾಮಮಂದಿರಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ. ಇನ್ನು ಇತ್ತ ಕರ್ನಾಟಕದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಏನು ಮಾಡಬಹುದು, ಏನು ಮಾಡಬಾರದು ಎಂಬುದರ ಬಗ್ಗೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಜನವರಿ 22ರವರೆಗೆ ಅಲರ್ಟ್ ಆಗಿರುವಂತೆ ಡಿಜಿ ಐಜಿಪಿ ಅಲೋಕ್ ಮೋಹನ್ ಅವರು ಎಲ್ಲಾ ಕಮೀಷನರೇಟ್ ಹಾಗೂ ಜಿಲ್ಲಾ ಎಸ್ಪಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಬೆಂಗಳೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ ಹಾಗೂ ಮಂಗಳೂರುಗಳಲ್ಲಿ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೊಡಲಾಗಿದೆ.
ರಾಜ್ಯದಲ್ಲಿರುವ ಎಲ್ಲಾ ಶ್ರೀರಾಮ ಹಾಗೂ ಆಂಜನೇಯನ ದೇವಸ್ಥಾನಗಳ ಬಳಿ ಪೊಲೀಸರು ಕಣ್ಗಾವಲಿಡುವಂತೆ ಸೂಚಿಸಲಾಗಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಕೂಡಾ ನಡೆಸಲಾಗಿದೆ.
ಏನು ಮಾಡಬಹುದು, ಏನು ಮಾಡಬಾರದು..?
ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬರುವ ದೇಗುಲಗಳ ಬಳಿ ಪೊಲೀಸರ ಅಲರ್ಟ್
ಅತೀ ಸೂಕ್ಷ್ಮ ಪ್ರದೇಶದಲ್ಲಿ ಕೆಎಸ್ಆರ್ಪಿ ತುಕಡಿ ನಿಯೋಜನೆ
ಪೂಜೆ, ಪುನಸ್ಕಾರ ಬಿಟ್ಟು ಬೇರೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ
ದೇವಸ್ಥಾನ ಬಳಿ ರಾಜಕೀಯವಾಗಿ ಮಾತನಾಡುವುದು ನಿಷಿದ್ಧ
ಪ್ರತಿಭಟನೆ ಮಾಡುವಂತಿಲ್ಲ, ಸಮಾಜದ ಶಾಂತಿ ಭಂಗ ಮಾಡುವ ಘೋಷಣೆ ಕೂಗುವಂತಿಲ್ಲ
ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೇಲೆ ಪೊಲೀಸರ ತೀವ್ರ ನಿಗಾ
ಜ.22 ವರೆಗೆ ಎಲ್ಲಾ ಅಧಿಕಾರಿಗಳೂ ತಮ್ಮ ಕಾರ್ಯವ್ಯಾಪ್ತಿಯಲ್ಲೇ ಇರಬೇಕು