ಗಾರ್ಮೆಂಟ್ಸ್ ನ ಮಹಿಳಾ ನೌಕರರಿಗೆ ಸರ್ಕಾರದಿಂದ ಉಚಿತ ಬಸ್ ಪಾಸ್
ಬೆಂಗಳೂರು : ನಗರದ ಗಾರ್ಮೆಂಟ್ಸ್ ನ ಮಹಿಳಾ ನೌಕರರಿಗೆ ಸರ್ಕಾರ ಉಚಿತ ಬಸ್ ಪಾಸ್ ನೀಡಲು ನಿರ್ಧರಿಸಿದೆ. ವನಿತಾ ಸಂಗಾತಿ ಯೋಜನೆಯಡಿ ಜನವರಿ ೨೨ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಿದ್ದೇವೆ ಎಂದು ಬಿಎಂಟಿಸಿ ತಿಳಿಸಿದೆ.
ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದದ್ದ ಬಜೆಟ್‌ನಲ್ಲಿ ಈ ಸೌಲಭ್ಯವನ್ನು ಒದಗಿಸುವುದಾಗಿ ಘೋಷಿಸಿದ್ದರು. ಈಗ ಬಸವರಾಜ್ ಬೊಮ್ಮಾಯಿಯವರು ಈ ಯೋಜನೆಯನ್ನು ಸಾಕಾರಗೊಳಿಸುತ್ತಿದ್ದಾರೆ.
ಗಾರ್ಮೆಂಟ್ಸ್‌ಗಳಲ್ಲಿ ೩ಲಕ್ಷಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಶೇ೮೦ರಷ್ಟು ಮಹಿಳೆಯರೇ ಆಗಿದ್ದಾರೆ. ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಅವರಿಗೆ ಬಸ್ ಪಾಸ್ ವಿತರಿಸಲಾಗುವುದು. ಈ ಸೌಲಭ್ಯವನ್ನು ತಮ್ಮದಾಗಿಸಿಕೊಳ್ಳಲು ಮಹಿಳಾ ನೌಕರರು ತಮ್ಮ ಮಾಲೀಕರಿಗೆ ಮನವಿ ಸಲ್ಲಿಸಬೇಕು.
ಕಾರ್ಖಾನೆ ಮಾಲೀಕರು ಕಾರ್ಮಿಕ ಕಲ್ಯಾಣ ಇಲಾಖೆಯ ಇ ಮೇಲ್ ಐಡಿಗೆ ( welfarecommissioner123@gmail.com) ಕಳುಹಿಸಬೇಕು. ಕಾರ್ಮಿಕ ಮಂಡಳಿಯಿಂದ ಪರೀಶೀಲನೇ ಆಗಿ ಬರುವ ನೌಕರರಿಗೆ ಮೆಜೆಸ್ಟಿಕ್‌ನ ನಿಲ್ದಾಣದ ಕೌಂಟರ್‌ನಲ್ಲಿ ಬಸ್ ಪಾಸ್ ವಿತರಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.