Health

ಅತಿ ಕೆಟ್ಟ ಸಮಯ ನಾವು ನೋಡಬೇಕಾಗಬಹುದು: ಒಮಿಕ್ರಾನ್‌ ಸೋಂಕಿನ ಬಗ್ಗೆ ಬಿಲ್‌ಗೇಟ್ಸ್‌ ಆತಂಕ

ವಾಷಿಂಗ್ಟನ್‌: ಪ್ರಪಂಚದಾದ್ಯಂತ ಒಮಿಕ್ರಾನ್‌ ಸೋಂಕು ಹರಡುತ್ತಿದ್ದು, ಅತಿ ಕೆಟ್ಟ ಸಮಯವನ್ನು ನಾವು ನೋಡಬೇಕಾಗಬಹುದು ಎಂದು ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ನನ್ನ ಆಪ್ತರು ಕೂಡಾ ಒಮಿಕ್ರಾನ್‌ ಸೋಂಕಿಗೆ ತುತ್ತಾಗಿದ್ದಾರೆ. ಈ ಸೋಂಕು ದಿನದಿಂದ ದಿನಕ್ಕೆ ಹರಡುತ್ತಲೇ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಸರ್ಕಾರಗಳು ಕೂಡಾ ಎಚ್ಚೆತ್ತುಕೊಂಡು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಲ್‌ ಗೇಟ್ಸ್‌ ಹೇಳಿದ್ದಾರೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಸರಣಿ ಟ್ವೀಟ್‌ ಮಾಡಿರುವ ಬಿಲ್‌ ಗೇಟ್ಸ್‌, ಕೊರೋನಾ ರೂಪಾಂತರಿ ಒಮಿಕ್ರಾನ್‌ ಬಗ್ಗೆ ಹೆಚ್ಚು ಆಂತಕ ವ್ಯಕ್ತಪಡಿಸಿದ್ದಾರೆ. ಒಮಿಕ್ರಾನ್‌ ಕಾರಣದಿಂದಾಗಿ ನಾನು ನನ್ನ ಬಹುತೇಕ ಪ್ರವಾಸಗಳನ್ನು ರದ್ದುಗೊಳಿಸಿದ್ದೇನೆ. ಆದಷ್ಟು ಎಲ್ಲರೂ ಇದ್ದಲ್ಲೇ ಇದ್ದು ತಮ್ಮ ವ್ಯವಹಾರವನ್ನು ಮುಂದುವರೆಸುವುದು ಒಳ್ಳೆಯದು. ಈ ಮೂಲಕ ಒಮಿಕ್ರಾನ್‌ ಹರಡದಂತೆ ನಿಯಂತ್ರಿಸಬೇಕು ಎಂದು ಅವರು ಹೇಳಿದ್ದಾರೆ.

Share Post