ಅಸಲಿ ವಜ್ರದ ಆಭರಣದ ಜಾಗದಲ್ಲಿ ನಕಲಿ ಇಟ್ಟು ವಂಚನೆ
ಬೆಂಗಳೂರು; ಜ್ಯುವೆಲ್ಲರಿ ಶಾಪ್ ಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಎಚ್ಚರ..ಕೆಲಸಕ್ಕೆ ಸಿಗ್ತಾರೆ ಅಂತಾ ಸಿಕ್ಕಿದವರನ್ನ ಕೆಲಸಕ್ಕೆ ಸೇರಿಸಿಕೊಂಡ್ರೆ ನಾಮ ಬೀಳೋದು ಗ್ಯಾರಂಟಿ.
ಯಲಹಂಕದ ಪ್ರತಿಷ್ಠಿತ ಜ್ಯುವೆಲ್ಲರ್ಸ್ ನಲ್ಲಿ ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಮಹಿಳೆಯೊಬ್ಬಳು ತನ್ನ ಕೈಚಳಕ ತೋರಿದ್ದಾಳೆ.ಚಿನ್ನ ತೋರಿಸುವ ಕೆಲಸ ಮಾಡುತ್ತಲೆ ಚಿನ್ನ ಎಗರಿಸಿಕೊಂಡು ಹೋಗಿದ್ದಾಳೆ. ಅಸಲಿ ಚಿನ್ನ ಮತ್ತು ವಜ್ರದ ಆಭರಣಗಳ ಜಾಗದಲ್ಲಿ ನಕಲಿ ಆಭರಣಯಿಟ್ಟು ಕಳ್ಳತನಮಾಡಿದ್ದಾಳೆ. ಲಕ್ಷಗಟ್ಟಲೇ ಆಭರಣ ಕದ್ದು ಹೋಗಿದ್ದ ಮಹಿಳೆ.ಅಸಲಿ ವಜ್ರದ ಆಭರಣದ ಜಾಗದಲ್ಲಿ ನಕಲಿ ಇಟ್ಟು ಯಾಮಾರಿಸಿದ್ದಾಳೆ.
ಓನರ್ ಗೆ ಅನುಮಾನ ಬಾರದಂತೆ ನಕಲಿ ಆಭರಣವಿಟ್ಟು ಪಂಗನಾಮ ಹಾಕಿದ ವಂಚಕಿಯನ್ನ ಪೋಲೀಸರು ಬಂದಿಸಿದ್ದಾರೆ .ಬಂಧಿತ ಆರೋಪಿ ಹೆಸರು ವಾಣಿ ವಾಡೇಕರ್ ಬಂಧಿತಳಿಂದ 58.60 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳೂ ವಶಕ್ಕೆಪಡೆದಿದ್ದಾರೆ.ಬಂದಿತ ಆರೋಪಿ Rmz galleriya ಮಾಲ್ ನಲ್ಲಿರುವ ತನಿಷ್ಕ್ ಜುವೆಲ್ಲರಿ ಯಲ್ಲಿ ಸೇಲ್ಸ್ ಆಫೀಸರ್ ಆಗಿ ಕೆಲಸಕ್ಕೆ ಮಾಡುತಿದದ್ದಳು.