ನಾಳೆ ನಟಿ ಪೂಜಾ ಗಾಂಧಿ ಮದುವೆ; ಉದ್ಯಮಿ ಜೊತೆ ಮಂತ್ರಮಾಂಗಲ್ಯ
ಬೆಂಗಳೂರು; ಮಳೆ ಹುಡುಗಿ ಎಂದೇ ಖ್ಯಾತರಾಗಿರುವ ನಟಿ ಪೂಜಾ ಗಾಂಧಿಯವರು ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಾಳೆ ಅವರ ಮದುವೆ ನಡೆಯಲಿದ್ದು, ಬೆಂಗಳೂರಿನ ಯಲಹಂಕದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಮಂತ್ರಮಾಂಗಲ್ಯದ ಮೂಲಕ ಮದುವೆಯಾಗಲು ಪೂಜಾಗಾಂಧಿ ನಿರ್ಧಾರ ಮಾಡಿದ್ದಾರೆ.
ಅಧಿಕೃತವಾಗಿ ಮದುವೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಉದ್ಯಮಿಯೊಬ್ಬರನ್ನು ಮಂತ್ರಮಾಂಗಲ್ಯದ ಮೂಲಕ ವರಿಸಲಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ಘೋರ್ಪಡೆ ಎಂಬುವವರ ಜೊತೆ ಪೂಜಾಗಾಂಧಿ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಪ್ತರಿಗೆ ಮಾತ್ರ ಮದುವೆ ಆಮಂತ್ರಣ ನೀಡಲಾಗಿದೆ ಎಂದು ತಿಳಿದುಬಂದಿದೆ.