BengaluruPolitics

ELECTION RESULT LIVE; ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಸೋಲು

‌ಬೆಳಗ್ಗೆ 12.26

ಶಿರಸಿಯಲ್ಲಿ ಸ್ಪೀಕರ್‌ ಕಾಗೇರಿಯವರಿಗೆ ಸೋಲಾಗಿದೆ. ಕಾಂಗ್ರೆಸ್‌ನ ಭಿಮಣ್ಣ ನಾಯ್ಕ್‌ಗೆ ಗೆಲುವು ಸಿಕ್ಕಿದೆ.

ಬೆಳಗ್ಗೆ 12.25

ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಸೋಲಾಗಿದೆ. ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್‌ ಗೆಲುವು ಸಾಧಿಸಿದ್ದಾರೆ. ಕೇವಲ 25 ದಿನಗಳಲ್ಲಿ ಪಕ್ಷ ಸಂಘಟಿಸಿ ಗೆಲುವು ಸಾಧಿಸಿದ ಪ್ರದೀಪ್‌ ಈಶ್ವರ್‌ ಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹನ್ನೊಂದು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ ಪ್ರದೀಪ್‌ ಈಶ್ವರ್

ಬೆಳಗ್ಗೆ 12.23

ಆರ್‌ಆರ್‌ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಭಾರೀ ಅಂತರದ ಹಿನ್ನಡೆಯಾಗಿದೆ. ಕಾಂಗ್ರೆಸ್‌ನ ಕುಸುಮಾ ಅವರಿಗೆ 9 ಸಾವಿರ ಮತಗಳ ಮುನ್ನಡೆಯಾಗಿದೆ.

ಬೆಳಗ್ಗೆ 12.18

ಬೆಳ್ತಂಗಡಿಯಲ್ಲಿ ಹರೀಶ್‌ ಪೂಂಜಾಗೆ ಗೆಲುವು, 13 ಸಾವಿರ ಮತಗಳ ಅಂತರದಿಂದ ಗೆಲುವು. ರಕ್ಷಿತ್‌ ಶಿವರಾಮ್‌ಗೆ ಮುಖಭಂಗ. ಕಾರ್ಕಳದಲ್ಲಿ ಸುನಿಲ್‌ ಕುಮಾರ್‌ಗೆ ಗೆಲುವು.

ಬೆಳಗ್ಗೆ 12.18

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಭಾರಿ ಅಂತರದ ಜಯ ಸಿಕ್ಕಿದೆ. ಡಿ.ಕೆ.ಶಿವಕುಮಾರ್‌ಗೆ ಸುಮಾರು 1 ಲಕ್ಷಕ್ಕೂ ಅಧಿಕಾರ ಮತಗಳ ಅಂತರದ ಜಯ ಸಿಕ್ಕಿದೆ. ಆರ್‌.ಅಶೋಕ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಬೆಳಗ್ಗೆ 12.13

ಚಿತ್ತಾಪುರದಲ್ಲಿ ಪ್ರಿಯಾಂಕ್‌ ಖರ್ಗೆಗೆ 16000 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅರಸೀಕೆರೆಯಲ್ಲಿ ಶಿವಲಿಂಗೇಗೌಡರಿಗೆ ಹತ್ತು ಸಾವಿರ ಮತಗಳ ಅಂತರದಿಂದ ಗೆಲುವು

ಬೆಳಗ್ಗೆ 12.12

ಅಥಣಿಯಲ್ಲಿ ರಮೇಶ್‌ ಜಾರಕಿಹೊಳಿಗೆ ಭಾರಿ ಮುಖಭಂಗವಾಗಿದೆ. ತಮ್ಮ ಆಪ್ತ ಮಹೇಶ್‌ ಕುಮಟಳ್ಳಿ ಭಾರಿ ಅಂತರದಲ್ಲಿ ಸೋಲನುಭವಿಸಿದ್ದಾರೆ. ಲಕ್ಷ್ಮಣ ಸವದಿ 59 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬೆಳಗ್ಗೆ 12.10

ಕೊಳ್ಳೇಗಾಲದಲ್ಲಿ ಬಿಜೆಪಿ ಅಭ್ಯರ್ಥಿ ಎನ್‌.ಮಹೇಶ್‌ ಭಾರಿ ಮುಖಭಂಗ. 50 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ ಎನ್‌.ಮಹೇಶ್‌

ಬೆಳಗ್ಗೆ 12.10

ಆರ್‌ಆರ್‌ ನಗರದಲ್ಲಿ ಮುನಿರತ್ನ ವಿರುದ್ಧ ಕುಸುಮಾ ಭಾರಿ  ಮುನ್ನಡೆ. ಐದು ಸಾವಿರ ಮತಗಳ ಅಂತರದಲ್ಲಿ ಕುಸುಮಾ ಮುನ್ನಡೆ. ಹೊನ್ನಾಳಿಯಲ್ಲಿ ರೇಣುಕಾಚಾರ್ಯಗೆ ಸೋಲು.

 

ಬೆಳಗ್ಗೆ 12.01

ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಗೆಲುವು ಸಾಧಿಸಿದ್ದಾರೆ.

ಬೆಳಗ್ಗೆ 11.57

ಆರ್‌ಆರ್‌ ನಗರದಲ್ಲಿ ಮುನಿರತ್ನಗೆ ಹಿನ್ನಡೆ. ಕಾಂಗ್ರೆಸ್‌ನ ಕುಸುಮಾಗೆ ಮುನ್ನಡೆ. ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲು 20 ಸಾವಿರ ಮತಗಳ ಅಂತರದಿಂದ ಸೋಲು.

ಬೆಳಗ್ಗೆ 11.55

ಮಂಗಳೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯು.ಟಿ.ಖಾದರ್‌ಗೆ ಭರ್ಜರಿ ಗೆಲುವು,. 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಯು.ಟಿ.ಖಾದರ್‌

ಬೆಳಗ್ಗೆ 11.50

ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ.ಸುಧಾಕರ್‌ಗೆ ಭಾರಿ ಹಿನ್ನಡೆ. ಎಂಟು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್‌ಗೆ ಮುನ್ನಡೆ

 

ಬೆಳಗ್ಗೆ 11.46

ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌ಎ.ನ್‌.ಸುಬ್ಬಾರೆಡ್ಡಿಗೆ ಜಯ. ಸತತ ಮೂರನೇ ಬಾರಿ ಜಯಗಳಿಸಿರುವ ಸುಬ್ಬಾರೆಡ್ಡಿ, ಹತ್ತು ಸಾವಿರ ಮತಗಳ ಅಂತರದಿಂದ ಸುಬ್ಬಾರೆಡ್ಡಿ ಗೆಲುವು

ಬೆಳಗ್ಗೆ 11.43

ಸೊರಬದಲ್ಲಿ ಮಧು ಬಂಗಾರಪ್ಪಗೆ ಭಾರಿ ಮುನ್ನಡೆ. ಸಹೋರದ ಕುಮಾರ ಬಂಗಾರಪ್ಪ ವಿರುದ್ಧ ಸುಮಾರು 23 ಸಾವಿರ ಮತಗಳ ಮುನ್ನಡೆ ಪಡೆದಿರುವ ಮಧು ಬಂಗಾರಪ್ಪ

ಬೆಳಗ್ಗೆ 11.42

ಕೋಲಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೊತ್ತೂರು ಮಂಜುಗೆ ಹತ್ತು ಸಾವಿರ ಮತಗಳ ಮುನ್ನಡೆ

ಬೆಳಗ್ಗೆ 11.40

ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಮುನ್ನಡೆ. ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಭಾರೀ ಹಿನ್ನಡೆ

ಬೆಳಗ್ಗೆ 11.36

ಮಸ್ಕಿಯಲ್ಲಿ ಕಾಂಗ್ರೆಸ್‌ನ ತುರುವಿಹಾಳಗೆ ಗೆಲುವು. ಕೆಜಿಎಫ್‌ನಲ್ಲಿ ಕಾಂಗ್ರೆಸ್‌ನ ರೂಪಕಲಾ ಶಶಿಧರ್‌ ಗೆ ಗೆಲುವು. ಆರ್‌ಆರ್‌ ನಗರದಲ್ಲಿ ಮುನಿರತ್ನಗೆ ಅಲ್ಪ ಮತಗಳ ಮುನ್ನಡೆ. 764 ಮತಗಳ ಹಿನ್ನಡೆಯಲ್ಲಿರುವ ಕುಸುಮಾ

ಬೆಳಗ್ಗೆ 11.31

ಚಾಮರಾಜಪೇಟೆಯಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಗೆಲುವು. ಸರ್ವಜ್ಞನಗರದಲ್ಲಿ ಕೆ.ಜೆ.ಜಾರ್ಜ್‌ ಗೆಲುವು, ಮಲ್ಲೇಶ್ವರಂನಲ್ಲಿ ಅಶ್ವತ್ಥನಾರಾಯಣಗೆ ಗೆಲುವು, ಚಿಂತಾಮಣಿಯಲ್ಲಿ ಎಂಸಿ ಸುಧಾಕರ್‌ಗೆ ಗೆಲುವು

ಬೆಳಗ್ಗೆ 11.28

ಚಾಮರಾಜನಗರದಲ್ಲಿ ಪುಟ್ಟರಂಗಶೆಟ್ಟಿ ವಿರುದ್ಧ ಸೋಮಣ್ಣ ಹತ್ತು ಸಾವಿರ ಮತಗಳ ಅಂತರದಿಂದ ಸೋಲು.

ಬೆಳಗ್ಗೆ 11.24

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಜಗದೀಶ್‌ ಶೆಟ್ಟರ್‌ಗೆ 18 ಸಾವಿರಕ್ಕೂ ಹೆಚ್ಚು ಮತಗಳಿಂದ ಹಿನ್ನಡೆ

ಬೆಳಗ್ಗೆ 11.23

ಅಥಣಿಯಲ್ಲಿ ಕಾಂಗ್ರೆಸ್‌ನ ಲಕ್ಷ್ಮಣ ಸವದಿಯವರು 27 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ

ಬೆಳಗ್ಗೆ 11.19

ಹಾಸನದಲ್ಲಿ ಜೆಡಿಎಸ್‌ನ ಸ್ವರೂಪ್‌ಗೆ ಗೆಲುವು ಸಿಕ್ಕಿದೆ. ಬಿಜೆಪಿಯ ಪ್ರೀತಂಗೌಡಗೆ ಮುಖಭಂಗ. ಹತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ ಸ್ವರೂಪ್‌.

ಬೆಳಗ್ಗೆ 11.17

ಕುಡಚಿಯಲ್ಲಿ ಪಿ.ರಾಜೀವ್‌ಗೆ ಭಾರಿ ಹಿನ್ನಡೆ. 17 ಸಾವಿರ ಮತಗಳ ಹಿನ್ನಡೆ. ಕಾಂಗ್ರೆಸ್‌ನ ಮಹೇಶ್‌ ತಮ್ಮಣ್ಣನವರ್‌ಗೆ ಮುನ್ನಡೆ

ಬೆಳಗ್ಗೆ 11.15

ಬಳ್ಳಾರಿ ಗ್ರಾಮೀಣದಲ್ಲಿ ಸಚಿವ ಶ್ರೀರಾಮುಲುಗೆ 25 ಸಾವಿರದ ಅಂತರದ ಹಿನ್ನಡೆ. ಗೆಲುವಿನ ಸನಿಹದಲ್ಲಿರುವ ಕಾಂಗ್ರೆಸ್‌ನ ನಾಗೇಂದ್ರ

ಬೆಳಗ್ಗೆ 11.15

ಚಳ್ಳಕೆರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಘುಮೂರ್ತಿ ಗೆಲುವು, ಕೂಡ್ಲಿಗಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ ಗೆಲುವು

ಬೆಳಗ್ಗೆ 11.03

ಬಾಗೇಪಲ್ಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುಬ್ಬಾರೆಡ್ಡಿಗೆ ಮುನ್ನಡೆ, ಶಿಡ್ಲಘಟ್ಟದಲ್ಲಿ ಜೆಡಿಎಸ್‌ ಅಭ್ಯರ್ಥಿ ರವಿಕುಮಾರ್‌ ಮುನ್ನಡೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಮುನ್ನಡೆ, ಚಿಂತಾಮಣಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುಧಾಕರ್‌ ರೆಡ್ಡಿ ಮುನ್ನಡೆ, ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿ ಗೌಡ ಮುನ್ನಡೆ

ಬೆಳಗ್ಗೆ 11.00

ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು.

ಬೆಳಗ್ಗೆ 10.54

ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಸುಮಾರು 14 ಸಾವಿರ ಮತಗಳ ಹಿನ್ನಡೆ. ಶಿರಸಿಯಲ್ಲಿ ಕಾಂಗ್ರೆಸ್‌ ಭೀಮಣ್ಣ ನಾಯ್ಕ್‌ಗೆ ಮುನ್ನಡೆ

ಬೆಳಗ್ಗೆ 10.49

ಬಳ್ಳಾರಿ ಗ್ರಾಮೀಣದಲ್ಲಿ ಬಿಜೆಪಿಯ ಶ್ರೀರಾಮುಲುಗೆ 9ನೇ ಸುತ್ತಿನಲ್ಲೂ ಭಾರಿ ಹಿನ್ನಡೆ. 22 ಸಾವಿರ ಮತಗಳ ಭಾರಿ ಹಿನ್ನಡೆ.

ಬೆಳಗ್ಗೆ 10.45

ಶ್ರೀನಿವಾಸಪುರದಲ್ಲಿ ಕಾಂಗ್ರೆಸ್‌ನ ರಮೇಶ್‌ಕುಮಾರ್‌ಗೆ ಒಂದು ಮತಗಳಿಂದ ಹಿನ್ನಡೆ. ಜಗದೀಶ್‌ ಶೆಟ್ಟರ್‌ಗೆ ಹತ್ತು ಸಾವಿರ ಮತಗಳ ಹಿನ್ನಡೆ. ಹಾಸನದಲ್ಲಿ ಪ್ರೀತಂ ಗೌಡಗೆ ಅಲ್ಪ ಹಿನ್ನಡೆ.

ಬೆಳಗ್ಗೆ 10.38

ರಾಜಸ್ಥಾನ, ಛತ್ತಿಸ್‌ಗಢ, ಹೈದರಾಬಾದ್‌, ತಮಿಳುನಾಡಿನ ಹೋಟೆಲ್‌ಗಳನ್ನು ಬುಕ್‌ ಮಾಡುತ್ತಿರುವ ಕಾಂಗ್ರೆಸ್‌. ಕಾಂಗ್ರೆಸ್‌ನ ಎಲ್ಲಾ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಲು ಸಿದ್ಧತೆ. ಕೆಜೆ ಜಾರ್ಜ್‌ಗೆ ಸೇರಿದ ಖಾಸಗಿ ಹೋಟೆಲ್‌ನಲ್ಲಿ ಇಂದು ರಾತ್ರಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ. ಸಭೆಯ ನಂತರ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡುವ ಸಾಧ್ಯತೆ. ಹೊರ ರಾಜ್ಯಗಳಲ್ಲಿ ಶಾಸಕರನ್ನಿಡಲು ಸಿದ್ಧತೆ.

ಬೆಳಗ್ಗೆ 10.34

ಕೊರಟಗೆರೆಯಲ್ಲಿ ಜಿ.ಪರಮೇಶ್ವರ್‌ಗೆ ಮುನ್ನಡೆ. ಆರನೇ ಸುತ್ತಿನಲ್ಲೂ ಸಿಸಿ ಪಾಟೀಲ್‌ಗೆ ಹಿನ್ನಡೆ.

ಬೆಳಗ್ಗೆ 10.28

ರೆಸಾರ್ಟ್‌ ರಾಜಕಾರಣಕ್ಕೆ ಸಿದ್ಧತೆ. ಕಾಂಗ್ರೆಸ್‌ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಮ್ಯಾಜಿಕ್‌ ನಂಬರ್‌ ದಾಟುತ್ತಿದ್ದಂತೆ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕರ ಸಭೆ ನಡೆಯುತ್ತಿದೆ.

ಬೆಳಗ್ಗೆ 10.24

ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಭಾರಿ ಹಿನ್ನಡೆ. ಸುಮಾರು 9 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ

ಬೆಳಗ್ಗೆ 10.18

ಗೋವಿಂದ ಕಾರಜೋಳ, ಶ್ರೀರಾಮುಲು, ಬಿ.ಸಿ.ನಾಗೇಶ್‌, ಸೋಮಣ್ಣ, ನಿಖಿಲ್‌ ಕುಮಾರಸ್ವಾಮಿ, ದಿನೇಶ್‌ ಗುಂಡೂರಾವ್‌, ಎಂಟಿಬಿ ನಾಗರಾಜ್‌, ರೇಣುಕಾಚಾರ್ಯ, ಆರ್‌.ವಿ.ದೇಶಪಾಂಡೆ, ಜಗದೀಶ್‌ ಶೆಟ್ಟರ್‌, ಶಾಮನೂರು ಶಿವಶಂಕರಪ್ಪ, ಅಶೋಕ್‌ ಖೇಣಿಗೆ ಹಿನ್ನಡೆ

ಬೆಳಗ್ಗೆ 10.15

ಚಿಕ್ಕಮಗಳೂರಿನಲ್ಲಿ ಮೂರನೇ ಸುತ್ತಿನಲ್ಲೂ ಸಿ.ಟಿ.ರವಿ ಹಿನ್ನಡೆ. ವಿಜಯನಗರದಲ್ಲಿ ಸಿದ್ದಾರ್ಥ್‌ ಸಿಂಗ್‌ಗೆ ಭಾರಿ ಹಿನ್ನಡೆ. ಗವಿಯಪ್ಪಗೆ ಐದು ಸಾವಿರ ಮತಗಳ ಮುನ್ನಡೆ. ಮುಧೋಳದಲ್ಲಿ ಗೋವಿಂದ ಕಾರಜೋಳ, ಹೊಸಕೋಟೆಯಲ್ಲಿ ಎಂಟಿಬಿಗೆ ಹಿನ್ನಡೆ.

ಬೆಳಗ್ಗೆ 10.13

ವಿ.ಸೋಮಣ್ಣಗೆ ಚಾಮರಾಜನಗರದಲ್ಲಿ ಸುಮಾರು 10 ಸಾವಿರ ಮತಗಳ ಹಿನ್ನಡೆಯಾಗಿದೆ. ಬಳ್ಳಾರಿ ಗ್ರಾಮೀಣದಲ್ಲಿ ಶ್ರೀರಾಮುಲುಗೆ 9 ಸಾವಿರ ಮತಗಳ ಅಂತರದ ಹಿನ್ನಡೆ

ಬೆಳಗ್ಗೆ 10.10

ಅಥಣಿಯಲ್ಲಿ ಲಕ್ಷ್ಮಣ ಸವದಿಯವರಿಗೆ ಭಾರಿ ಮುನ್ನಡೆ. 17 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ. ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹಿನ್ನಡೆ

ಬೆಳಗ್ಗೆ 10.08

ನಂಜನಗೂಡಿನಲ್ಲಿ ದರ್ಶನ್‌ ಧ್ರುವನಾರಾಯಣ್‌ಗೆ ಮುನ್ನಡೆ. ವರುಣಾದಲ್ಲಿ ಸಿದ್ದರಾಮಯ್ಯ 6 ಸಾವಿರ ಮತಗಳಿಂದ ಮುನ್ನಡೆ. ಅಶೋಕ್‌ ಖೇಣಿ, ಬಂಡಪ್ಪ ಕಾಶೆಂಪುರ್‌ ಮುನ್ನಡೆ. ಕೋಲಾರ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಮುನ್ನಡೆ.

ಬೆಳಗ್ಗೆ 10.05

ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿಗೆ ಭಾರಿ ಹಿನ್ನಡೆ. ಕಾಂಗ್ರೆಸ್‌ ಅಭ್ಯರ್ಥಿ ಸವದಿಗೆ 17 ಸಾವಿರ ಮತಗಳ ಭಾರಿ ಮುನ್ನಡೆ. ಶಿಗ್ಗಾಂವಿಯಲಕ್ಲಿ ಸಿಎಂ ಬೊಮ್ಮಾಯಿಗೆ 12 ಸಾವಿರ ಮತಗಳ ಅಂತರದ ಮುನ್ನಡೆ.

ಬೆಳಗ್ಗೆ 10.01

ಮೇಲುಕೋಟೆಯಲ್ಲಿ ದರ್ಶನ್‌ ಪುಟ್ಟಣ್ಣಯ್ಯಗೆ ಅಲ್ಪ ಮುನ್ನಡೆ. ಗೋವಿಂದರಾಜ ನಗರದಲ್ಲಿ ಕಾಂಗ್ರೆಸ್‌ನ ಪ್ರಿಯಾ ಕೃಷ್ಣಗೆ ಮುನ್ನಡೆ. ಗಂಗಾವತಿಯಲ್ಲಿ ಜನಾರ್ದನರೆಡ್ಡಿಗೆ ಮುನ್ನಡೆ. ಹೆಚ್.ಡಿ.ಕೋಟೆಯಲ್ಲಿ ಕಾಂಗ್ರೆಸ್‌ನ ಅನಿಲ್‌ಗೆ ಮುನ್ನಡೆ

ಬೆಳಗ್ಗೆ 9.59

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪಗೆ ಅಲ್ಪ ಮತಗಳ  ಮುನ್ನಡೆ. ಹಾಸನದಲ್ಲಿ ಪ್ರೀತಂ ಗೌಡಗೆ 176 ಮತಗಳ ಮುನ್ನಡೆ

ಬೆಳಗ್ಗೆ 9.57

ಚಿಕ್ಕಬಳ್ಳಾಪುರದಲ್ಲಿ ನಾಲ್ಕನೇ ಸುತ್ತಿನಲ್ಲೂ ಪ್ರದೀಪ್‌ ಈಶ್ವರ್‌ಗೆ ಮುನ್ನಡೆ. ಸುಧಾಕರ್‌ಗೆ ಹಿನ್ನಡೆ. ಕೊಳ್ಳೆಗಾಲದಲ್ಲಿ ಎನ್‌.ಮಹೇಶ್‌ಗೆ ಭಾರಿ ಹಿನ್ನಡೆ

ಬೆಳಗ್ಗೆ 9.55

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಮುನ್ನಡೆ, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಅಲ್ಪ ಮುನ್ನಡೆ. 710 ಮತಗಳಿಂದ ಮುನ್ನಡೆ ಪಡೆದ ಹೆಚ್‌ಡಿಕೆ

ಬೆಳಗ್ಗೆ 9.52

ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್‌ಗೆ ಐದನೇ ಸುತ್ತಿನಲ್ಲೂ ಹಿನ್ನಡೆ. ಆರು ಸಾವಿರದ ಮತಗಳಿಂದ ಕಾಂಗ್ರೆಸ್‌ನ ಬಣಕಾರ್‌ಗೆ ಮುನ್ನಡೆ. ಗಾಂಧಿನಗರದಲ್ಲಿ ದಿನೇಶ್‌ ಗುಂಡೂರಾವ್‌ಗೆ ಅಲ್ಪ ಮುನ್ನಡೆ

 

ಬೆಳಗ್ಗೆ 9.52

ಕನಕಪುರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಅವರು 15 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ. ಆರ್‌.ಅಶೋಕ್‌ಗೆ ತೀವ್ರ ಹಿನ್ನಡೆ. ಟಿ.ನರಸೀಪುರದಲ್ಲಿ ಮೂರನೇ ಸುತ್ತಿನಲ್ಲೂ ಮಹದೇವಪ್ಪಗೆ ಹಿನ್ನಡೆ.

ಬೆಳಗ್ಗೆ 9.47

ಕೆ.ಆರ್‌.ಪೇಟೆಯಲ್ಲಿ ಸಚಿವ ನಾರಾಯಣಗೌಡಗೆ ಸತತ ಹಿನ್ನಡೆ. ಜೆಡಿಎಸ್‌ಮ ಹೆಚ್‌.ಡಿ.ಮಂಜುಗೆ ಮುನ್ನಡೆ. ನಾಗಮಂಗಲದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ.

ಬೆಳಗ್ಗೆ 9.46

ಯಮಕನಮರಡಿಯಲ್ಲಿ ಕಾಂಗ್ರೆಸ್‌ನ ಆರನೇ ಸುತ್ತಿನಲ್ಲೂ ಭಾರಿ ಮುನ್ನಡೆ. 14 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ.

ಬೆಳಗ್ಗೆ 9.45

ಗಾಂಧಿನಗರದಲ್ಲಿ ಮೂರನೇ ಸುತ್ತಿನಲ್ಲೂ ದಿನೇಶ್‌ ಗುಂಡೂರಾವ್‌ಗೆ ಹಿನ್ನೆಡೆ. ಬಿಜೆಪಿಯ ಸಪ್ತಗಿರಿಗೌಡಗೆ ಮುನ್ನಡೆ. ವಿಜಯಪುರದಲ್ಲಿ ಯತ್ನಾಳ್‌ ಮುನ್ನಡೆ. ನರಗುಂದದಲ್ಲಿ ಬಿಜೆಪಿಯ ಸಿಸಿ ಪಾಟೀಲ್‌ಗೆ ಹಿನ್ನಡೆ

ಬೆಳಗ್ಗೆ 9.41

ಶಾಂತಿನಗರದಲ್ಲಿ ಕಾಂಗ್ರೆಸ್‌ನ ಎನ್‌.ಹ್ಯಾರಿಸ್‌ ಹಿನ್ನಡೆ. ಚಿಕ್ಕಪೇಟೆ ಉದಯ್‌ ಗರುಡಾಚಾರ್‌ ಮುನ್ನಡೆ. ಗಾಂಧಿನಗರದಲ್ಲಿ ದಿನೇಶ್‌ ಗುಂಡೂರಾವ್‌ಗೆ ಹಿನ್ನಡೆ. ಎರಡನೇ ಸುತ್ತಿನಲ್ಲೂ ಸಿ.ಟಿ.ರವಿಗೆ ಚಿಕ್ಕಮಗಳೂರಿನಲ್ಲಿ ಹಿನ್ನಡೆ.

ಬೆಳಗ್ಗೆ 9.38

ಪುತ್ತೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈಗೆ ಮುನ್ನಡೆ. ಚಾಮರಾಜನಗರದಲ್ಲಿ ವಿ.ಸೋಮಣ್ಣಗೆ 9 ಸಾವಿರ ಮತಗಳ ಹಿನ್ನಡೆ. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡಗೆ ಮುನ್ನಡೆ

ಬೆಳಗ್ಗೆ 9.36

ದೇವನಹಳ್ಳಿಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಹೆಚ್‌.ಮುನಿಯಪ್ಪಗೆ ಭಾರಿ ಹಿನ್ನಡೆ. ಚಾಮರಾಜನಗರದಲ್ಲಿ ವಿ.ಸೋಮಣ್ಣಗೆ ಭಾರಿ ಹಿನ್ನಡೆ.

ಬೆಳಗ್ಗೆ 9.34

ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾಂವಿ ಕ್ಷೇತ್ರ ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ. ಸಿಎಂ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಭಾರಿ ಹಿನ್ನಡೆ. ಭಟ್ಕಳದಲ್ಲಿ ಸುನಿಲ್‌ ನಾಯ್ಕ್‌ಗೆ ಹಿನ್ನಡೆ. ಕಾಂಗ್ರೆಸ್‌ನ ಮಾಂಕಾಳ್‌ ವೈದ್ಯಗೆ ಮುನ್ನಡೆ.

ಬೆಳಗ್ಗೆ 9.30

ಗೋಕಾಕ್‌ನಲ್ಲಿ ಬಿಜೆಪಿಯ ರಮೇಶ್‌ ಜಾರಕಿಹೊಳಿಗೆ ನಾಲ್ಕನೇ ಸುತ್ತಿನಲ್ಲೂ ಹಿನ್ನಡೆ. ಶಿಕಾರಿಪುರದಲ್ಲಿ ಬಿಜೆಪಿಯ ವಿಜಯೇಂದ್ರಗೆ ಹಿನ್ನಡೆ.

ಬೆಳಗ್ಗೆ 9.28

ಕುಡುಚಿ ಕ್ಷೇತ್ರದಲ್ಲಿ ಬಿಜೆಪಿಯ ಪಿ.ರಾಜೀವ್‌ಗೆ ಹಿನ್ನಡೆ. ಕಾಂಗ್ರೆಸ್‌ನ ಮಹೇಶ್‌ಗೆ ಮುನ್ನಡೆ.

ಬೆಳಗ್ಗೆ 9.20

ಬೆಂಗಳೂರಿನ ವಿಜಯನಗರದಲ್ಲಿ ಕಾಂಗ್ರೆಸ್‌ನ ಎಂ.ಕೃಷ್ಣಪ್ಪಗೆ ಹಿನ್ನಡೆ, ರವೀಂದ್ರಗೆ ಮುನ್ನಡೆ. ಶಾಂತಿನಗರದಲ್ಲಿ ಎನ್‌.ಎ.ಹ್ಯಾರಿಸ್‌ಗೆ ಹಿನ್ನಡೆ.

ಬೆಳಗ್ಗೆ 9.19

ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್‌ಗೆ ಹಿನ್ನಡೆ. ಶರತ್‌ ಬಚ್ಚೇಗೌಡಗೆ ಮುನ್ನಡೆ. ಕೋಲಾರದಲ್ಲಿ ಕೊತ್ತೂರು ಮಂಜುನಾಥ್‌ ಹಿನ್ನಡೆ

ಬೆಳಗ್ಗೆ 9.15

ಪದ್ಮನಾಭನಗರದಲ್ಲಿ ಆರ್‌.ಆಶೋಕ್‌ಗೆ ಮುನ್ನಡೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಎರಡನೇ ಸುತ್ತಿನಲ್ಲೂ ಜಗದೀಶ್‌ ಶೆಟ್ಟರ್‌ಗೆ ಹಿನ್ನಡೆ. ಮೂರನೇ ಸುತ್ತಿನಲ್ಲೂ ರಮೇಶ್‌ ಜಾರಕಿಹೊಳಿಗೂ ಹಿನ್ನಡೆ.

ಬೆಳಗ್ಗೆ 9.14

14ಕ್ಕೂ ಹೆಚ್ಚು ಹಾಲಿ ಸಚಿವರಿಗೆ ಎರಡನೇ ಸುತ್ತಿನಲ್ಲಿ ಹಿನ್ನಡೆ. ಪ್ರಮುಖ ಸಚಿವರಿಗೇ ಹಿನ್ನಡೆ. ಚಾಮರಾಜನಗರದಲ್ಲಿ ವಿ.ಸೋಮಣ್ಣಗೆ 4 ಸಾವಿರ ಮತಗಳ ಹಿನ್ನಡೆ. ನಿಖಿಲ್‌ ಕುಮಾರಸ್ವಾಮಿಗೆ ಮೂರೂವರೆ ಸಾವಿರ ಮತಗಳ ಅಂತರದ ಮುನ್ನಡೆ.

ಬೆಳಗ್ಗೆ 9.13

ರಾಜಾಜಿನಗರದಲ್ಲಿ ಮಾಜಿ ಸಚಿವ ಸುರೇಶ್‌ ಕುಮಾರ್‌ಗೆ ಹಿನ್ನಡೆ. ಯಶವಂತಪುರದಲ್ಲಿ ಜೆಡಿಎಸ್‌ನ ಜವರಾಯಿ ಗೌಡ ಅವರಿಗೆ ಮುನ್ನಡೆ. ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆಗೆ ಹಿನ್ನಡೆ.

ಬೆಳಗ್ಗೆ 9.11

ಗಾಂಧಿನಗರದಲ್ಲಿ ದಿನೇಶ್‌ ಗುಂಡೂರಾವ್‌ಗೆ ಹಿನ್ನಡೆ. ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಎರಡನೇ ಸುತ್ತಿನಲ್ಲೂ ಹಿನ್ನಡೆ. ನಾಗೇಂದ್ರ 1348 ಮತಗಳ ಮುನ್ನಡೆ.

ಬೆಳಗ್ಗೆ 9.07

ಬೆಳ್ತಂಗಡಿಯಲ್ಲಿ ಬಿಜೆಪಿಯ ಹರೀಶ್‌ ಪೂಂಜಾಗೆ ಮುನ್ನಡೆ. ಕಾಂಗ್ರೆಸ್‌ನ ರಕ್ಷಿತ್‌ ಶಿವರಾಮ್‌ಗೆ ಹಿನ್ನಡೆ. ಹರೀಶ್‌ಗೆ 964 ಮತಗಳ ಅಂತರದ ಮುನ್ನಡೆ. ರಾಜಾಜಿನಗರದಲ್ಲಿ ಕಾಂಗ್ರೆಸ್‌ನ ಪುಟ್ಟಣಗೆ ಮುನ್ನಡೆ

ಬೆಳಗ್ಗೆ 9.05

ಚನ್ನಪಟ್ಟಣದಲ್ಲಿ ಹೆಚ್‌.ಡಿ.ಕುಮಾರಸ್ವಾಮಿಯವರಿಗೆ 300 ಮತಗಳ ಹಿನ್ನಡೆ. ಅಥಣಿಯಲ್ಲಿ ಕಾಂಗ್ರೆಸ್‌ನ ಸವದಿ 2942 ಮತಗಳ ಮುನ್ನಡೆ

ಬೆಳಗ್ಗೆ 9.02

ಸತತವಾಗಿ ಚನ್ನಪಟ್ಟಣದಲ್ಲಿ ಬಿಜೆಪಿಯ ಯೋಗೇಶ್ವರ್‌ಗೆ ಮುನ್ನಡೆ. ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿಗೆ ಹಿನ್ನಡೆ. ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಮುನ್ನಡೆ. ಅಥಣಿಯಲ್ಲಿ ಸವದಿ ಮುನ್ನಡೆ.

ಬೆಳಗ್ಗೆ 9.00

ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮುನ್ನಡೆ. ಹೊಳಲ್ಕೆರೆಯಲ್ಲಿ ಎಚ್‌.ಆಂಜನೇಯ ಹಿನ್ನಡೆ. ಬೇಲೂರಿನಲ್ಲಿ ಬಿಜೆಪಿಯ ಸುರೇಶ್‌ಗೆ ಮುನ್ನಡೆ.

ಬೆಳಗ್ಗೆ 9.00

ಕಾಂಗ್ರೆಸ್‌ – 79

ಬಿಜೆಪಿ  –  65

ಜೆಡಿಎಸ್‌ – 21

ಇತರೆ  – ೦2

ಬೆಳಗ್ಗೆ  8.50

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಸುಧಾಕರ್‌ ಹಿನ್ನೆಡೆ

ಸಚಿವ ಸೋಮಣ್ಣ ಚಾಮರಾಜನಗರ ಹಾಗೂ ವರುಣಾ ಎರಡರಲ್ಲೂ ಹಿನ್ನಡೆ

ಹಳಿಯಾಳದಲ್ಲಿ ಆರ್‌.ವಿ.ದೇಶಪಾಂಡೆಗೆ ಹಿನ್ನಡೆ

ಚನ್ನಪಟ್ಟಣದಲ್ಲಿ ಹೆಚ್‌.ಡಿ.ಕುಮಾರಸ್ವಾಮಿಗೆ ಹಿನ್ನಡೆ

ಬೀಳಗಿಯಲ್ಲಿ ಮರುಗೇಶ್‌ ನಿರಾಣಿಗೆ ಹಿನ್ನಡೆ

ಗೋಕಾಕ್‌ನಲ್ಲಿ ರಮೇಶ್‌ ಜಾರಕಿಹೊಳಿಗೆ ಹಿನ್ನಡೆ

ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್‌ಗೂ ಹಿನ್ನಡೆ

ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್‌ಗೆ ಹಿನ್ನಡೆ

ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀರಾಮುಲು ಹಿನ್ನೆಡೆ

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಹಿನ್ನಡೆ

 

ಬೆಳಗ್ಗೆ  8.49

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಅವರು 3 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಹಿನ್ನಡೆ.

ಬೆಳಗ್ಗೆ  8.48

ಸಚಿವ ವಿ.ಸೋಮಣ್ಣ ಅವರು ಎರಡೂ ಕ್ಷೇತ್ರದಲ್ಲಿ ಹಿನ್ನಡೆ. ಚಾಮರಾಜನಗರ ಹಾಗೂ ವರುಣಾ ಎರಡೂ ಕ್ಷೇತ್ರದಲ್ಲಿ ಹಿನ್ನಡೆ.

ಬೆಳಗ್ಗೆ  8.45

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಜಗದೀಶ್‌ ಶಟ್ಟರ್‌ಗೆ ಹಿನ್ನಡೆ. ಯಶವಂತಪುರದಲ್ಲಿ ಎಸ್‌.ಟಿ.ಸೋಮಶೇಖರ್‌ಗೆ ಹಿನ್ನಡೆ. ಹಳಿಯಾಳದಲ್ಲಿ ಆರ್‌.ವಿ.ದೇಶಪಾಂಡೆಗೆ ಹಿನ್ನಡೆ.

ಬೆಳಗ್ಗೆ  8.44

ಚೆನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಮುನ್ನಡೆ. ಹೆಚ್‌ಡಿಕೆ ಹಿನ್ನಡೆ. ಗಂಗಾವತಿಯಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿಗೆ ಮುನ್ನಡೆ.

ಬೆಳಗ್ಗೆ  8.28

ಕಾಂಗ್ರೆಸ್‌ – 51

ಬಿಜೆಪಿ  –  57

ಜೆಡಿಎಸ್‌ – 17

ಇತರೆ  – ೦3

ಬೆಳಗ್ಗೆ  8.39

ರಾಜಾಜಿನಗರದಲ್ಲಿ ಮಾಜಿ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಹಿನ್ನಡೆಯಾಗಿದೆ. ಕೋಲಾರದಲ್ಲಿ ಕಾಂಗ್ರೆಸ್‌ ಅಬ್ಯರ್ಥಿ ಕೊತ್ತೂರು ಮಂಜುಗೆ ಮುನ್ನಡೆ

ಬೆಳಗ್ಗೆ  8.36

ಧಾರವಾಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ಕುಲಕರ್ಣಿಗೆ ಮುನ್ನಡೆ. ಬೆಂಗಳೂರಿನ ಶಾಂತಿನಗರದಲ್ಲಿ ಎನ್‌.ಎ.ಹ್ಯಾರಿಸ್‌ ಹಿನ್ನಡೆ

ಬೆಳಗ್ಗೆ  8.35

ಚಾಮರಾಜಪೇಟೆಯಲ್ಲಿ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ಆರಂಭಿಕ ಹಿನ್ನಡೆಯಾಗಿದೆ.

ಬೆಳಗ್ಗೆ  8.32

ಗೋಕಾಕ್‌ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಜಾರಕಿಹೊಳಿಗೆ ಆರಂಭಿಕ ಹಿನ್ನಡೆ. ಹೊಳೆ ನರಸೀಪುರದಲ್ಲಿ ಎಚ್‌.ಡಿ.ರೇವಣ್ಣಗೆ ಆರಂಭಿಕ ಹಿನ್ನಡೆ.

ಬೆಳಗ್ಗೆ  8.30

ಹಾಸನದಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡಗೆ ಮತ್ತೆ ಹಿನ್ನಡೆ. ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ಮುನ್ನಡೆಯಾಗಿದೆ. ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣಗೆ ಮುನ್ನಡೆ. ಹೊನ್ನಾಳಿಯಲ್ಲಿ ರೇಣುಕಾಚಾರ್ಯಗೆ ಹಿನ್ನಡೆ.

ಬೆಳಗ್ಗೆ  8.28

ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಅವರು ಮುನ್ನಡೆ. ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡಗೆ ಹಿನ್ನಡೆಯಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ದೇವರಾಜ್‌ಗೆ ಮುನ್ನಡೆ.

ಬೆಳಗ್ಗೆ  8.28

ಕಾಂಗ್ರೆಸ್‌ – 40

ಬಿಜೆಪಿ  – 44

ಜೆಡಿಎಸ್‌ – 14

ಇತರೆ  – ೦1

ಬೆಳಗ್ಗೆ  8.25

ಮೂಡಬಿದಿರೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.

ಬೆಳಗ್ಗೆ  8.22

ಅರಕಲಗೂಡಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಎ.ಮಂಜುಗೆ ಮುನ್ನಡೆ.

ಬೆಳಗ್ಗೆ  8.21

ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ಗೆ ಹಿನ್ನಡೆ, ಬಿಜೆಪಿ ಅಬ್ಯರ್ಥಿ ಪ್ರೀತಂ ಗೌಡಗೆ ಮುನ್ನಡೆ

ಬೆಳಗ್ಗೆ  8.20

ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ್‌ ಮುನ್ನಡೆ ಸಾಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಬ್ಬಯ್ಯ ಪ್ರಸಾದ್‌ಗೆ ಮುನ್ನಡೆ

ಬೆಳಗ್ಗೆ  8.18

ಮಾಲೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್‌ಗೆ ಮುನ್ನಡೆ. ಬದಾಮಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿಗೆ ಮುನ್ನಡೆ. ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಮುನ್ನಡೆ.

ಬೆಳಗ್ಗೆ  8.15

ಉಡುಪಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಮುನ್ನಡೆ. ಶ್ರೀನಿವಾಸಪುರದಲ್ಲಿ ರಮೇಶ್‌ ಕುಮಾರ್‌ ಹಿನ್ನಡೆಯಾಗಿದೆ.

ಬೆಳಗ್ಗೆ  8.15

ಕಾಂಗ್ರೆಸ್‌ – 22

ಬಿಜೆಪಿ  – 30

ಜೆಡಿಎಸ್‌ – 02

ಇತರೆ  – ೦೦

 

ಬೆಳಗ್ಗೆ  8.10

ಕಾಂಗ್ರೆಸ್‌ – 41

ಬಿಜೆಪಿ  – 20

ಜೆಡಿಎಸ್‌ – 02

ಇತರೆ  – ೦೦

ಬೆಳಗ್ಗೆ 8.10

ಸರವ್ಜ್ಞನಗರದಲ್ಲಿ ಕೆ.ಜೆ.ಜಾರ್ಜ್‌, ಕಾರ್ಕಳದಲ್ಲಿ ಸುನಿಲ್‌ ಕುಮಾರ್‌ ಮುನ್ನಡೆ ಸಾಧಿಸಿದ್ದಾರೆ.

ಬೆಳಗ್ಗೆ 8.05

ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಪಾಲಯ್ಯ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹಾಗೂ ಮಲ್ಲೇಶ್ವರದಲ್ಲಿ ಅಶ್ವತ್ಥನಾರಾಯಣ ಮುನ್ನಡೆ

ಬೆಳಗ್ಗೆ 8.02;

ಕಾಂಗ್ರೆಸ್‌ಗೆ ಆರಂಭಿಕ ಮುನ್ನಡೆ. ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್‌ನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಬೆಳಗ್ಗೆ 8 ಗಂಟೆ;

ರಾಜ್ಯಾದ್ಯಂತ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ, ಮೊದಲಿಗೆ ಅಂಚೆ ಮತಗಳ ಎಣಿಕೆ ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಅಂಚೆ ಮತಗಳ ಎಣಿಕೆಯ ವಿವರ ಸಿಗಲಿದೆ.

Share Post