Bengaluru

ರಾಜ್ಯ ಒಕ್ಕಲಿಗರ ಸಹಕಾರ ಸಂಘದ ಗದ್ದುಗೆ ಯಾರಿಗೆ?

ಬೆಂಗಳೂರು: ರಾಜ್ಯ ಒಕ್ಕಲಿಗರ ಸಹಕಾರ ಸಂಘದ ಚುನಾವಣೆಯ ಫಲಿತಾಂಶ ತಡರಾತ್ರಿ ಹೊರಬಿದ್ದಿದೆ. ಸುಮಾರು 35 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ತಡರಾತ್ರಿವರೆಗೆ ಮತ ಎಣಿಕೆ ಮಾಡಲಾಗಿತ್ತು. ಹಲವು ಗೊಂದಲಗಳ ನಡುವೆ ಕೊನೆಗೂ ಫಲಿತಾಂಶ ಪ್ರಕಟವಾಗಿದೆ. ಅರಮನೆ ಮೈದಾನದಲ್ಲಿ ನಿನ್ನೆ ಬೆಳಗ್ಗೆ 9 ಗಂಟೆಯಿಂದ ಮತ ಎಣಿಕೆ ಆರಂಭವಾಗಿ, ತಡರಾತ್ರಿ 12 ಗಂಟೆವರೆಗೆ ನಡೆದಿತ್ತು. ಬಳಿಕ ಮತ ಎಣಿಕೆ ಮುಕ್ತಾಯಗೊಂಡಿದ್ದು, ಚುನಾವಣಾಧಿಕಾರಿಗಳು ವಿಜೇತರ ಹೆಸರು ಘೋಷಣೆ ಮಾಡಿದ್ದಾರೆ.
ತುಮಕೂರಿನ ಮಾಜಿ ಶಾಸಕ ನಾಗರಾಜಯ್ಯ ಅವರ ಪುತ್ರ ಲೋಕೇಶ್ ಡಿ.ನಾಗರಾಜಯ್ಯ ಸೇರಿ ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ, ಬಿ.ಪಿ.ಮಂಜೇಗೌಡ ಸೇರಿ ಅನೇಕರು ಜಯಗಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಕೆಲ ಜಿಲ್ಲೆಗಳ ಫಲಿತಾಂಶ ಹೊರಬಿದ್ದಿತು.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ

1.ಡಾ.ಟಿ ಹೆಚ್ ಆಂಜನಪ್ಪ
2.ಅಶೋಕ್ ಹೆಚ್ ಎನ್. (ತಮ್ಮಜಿ)
3.ಕೆಂಚಪ್ಪಗೌಡ
4.ಆರ್ ಪ್ರಕಾಶ್
5.ಹೆಚ್ ಸಿ ಜಯಮುತ್ತು
6.ಸಿ ದೇವರಾಜ್ (ಹಾಪ್ ಕಾಮ್ಸ್)
7.ಎಲ್ ಶ್ರೀನಿವಾಸ್
8.ಸಿಎಂ ಮಾರೇಗೌಡ
9.ಬಿ.ವಿ.ರಾಜಶೇಖರ್ ಗೌಡ
10.ಕೆ ಎಸ್ ಸುರೇಶ್
11.ಎಂ ಎಸ್ ಉಮಾಪತಿ
12.ವೆಂಕಟರಾಮೇಗೌಡ
13.ಡಿ. ಹನುಮಂತಯ್ಯ
14. ಎಂ ಪುಟ್ಟ ಸ್ವಾಮಿ
15. ಡಾ.ವಿ.ನಾರಾಯಣ ಸ್ವಾಮಿ

Share Post