BengaluruCrime

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್‌ ಹಾರಾಟ; ಕೆಲಕಾಲ ಗೊಂದಲ

ಬೆಂಗಳೂರು; ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇ ಬಳಿ ಅನಾಮಿಕ ಡ್ರೋನ್‌ ಹಾರಾಟ ನಡೆಸಿದೆ. ವಿಮಾನಗಳನ್ನು ನಿಲ್ಲಿಸಿದ್ದ ಸ್ಥಳದಲ್ಲೇ ಡ್ರೋನ್‌ ಹಾರಾಟ ಮಾಡಿದೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಳ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 

ವಿಮಾನಗಳ ಟೇಕಾಫ್‌ ಸ್ಥಳದಿಂದ ಕೊಂಚ ದೂರದಲ್ಲೇ ಡ್ರೋನ್‌ ಹಾರಿದೆ. ಇದನ್ನು ಕಂಡ ಪೈಲಟ್‌ ಎಟಿಸಿ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು ಟೇಕಾಫ್‌ ಆಗುವ ಸ್ಥಳದಲ್ಲಿಯೇ ಆರೆಂಜ್ ಮತ್ತು ಹಳದಿ ಬಣ್ಣದ ಡ್ರೋನ್ ಹಾರಿದೆ.

 

Share Post