BengaluruHealth

ಪ್ರತಿದಿನ ತೊಂಬತ್ತು ನಿಮಿಷ ನಡೆದರೆ ಎಷ್ಟು ಲಾಭ ಗೊತ್ತಾ..?

ಬೆಂಗಳೂರು; ಉತ್ತಮ ಆರೋಗ್ಯಕ್ಕೆ ನಾವು ತಿನ್ನುವ ಆಹಾರದಷ್ಟೇ ನಮ್ಮ ಜೀವನಶೈಲಿಯೂ ಮುಖ್ಯವಾಗಿದೆ. ಆರೋಗ್ಯವಾಗಿರಲು ತಿನ್ನುವುದು ಸಾಕಾಗುವುದಿಲ್ಲ. ಸರಿಯಾದ ವ್ಯಾಯಾಮ, ನಿದ್ರೆ ಮತ್ತು ನೀರು ಸಹ ಬಹಳ ಮುಖ್ಯ. ನೀವು ಸಹ ವಾಕಿಂಗ್‌ ಮಾಡಬೇಕು ಎಂದುಕೊಂಡು ಸುಮ್ಮನಾಗುತ್ತಿದ್ದೀರಾ..? ಹಾಗಾದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಯಾಕಂದ್ರೆ ಪ್ರತಿದಿನ 90 ನಿಮಿಷಗಳ ಕಾಲ ನಡೆಯುವುದು ತುಂಬಾ ಉಪಯುಕ್ತವಾಗಿದೆ.

ನಡಿಗೆಯಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದಿನವೂ ಯಾವುದೋ ಕೆಲಸದ ಕಾರಣದಿಂದ ಅಲ್ಲಿ ಇಲ್ಲಿ ಓಡಾಡುತ್ತಿದ್ದೇನೆ ಎಂದು ಹಲವರು ಭಾವಿಸುತ್ತಾರೆ.  ಹೀಗಾಗಿ ವಾಕಿಂಗ್‌ ಮಾಡೋದು ಅವಶ್ಯಕತೆ ಇಲ್ಲ ಎಂದು ಭಾವಿಸುತ್ತಾರೆ. ವಾಸ್ತವವಾಗಿ ಯಾವುದೋ ಕೆಲಸದ ಮೇಲೆ ನಡೆಯೋದು ವಾಕಿಂಗ್‌ ಅನಿಸಿಕೊಳ್ಳೋದಿಲ್ಲ.

ಕೇವಲ ಧ್ಯಾನದೊಂದಿಗೆ ನಡೆಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ವಾಕಿಂಗ್ ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಾನವ ದೇಹವು ಸುಮಾರು ಐದು ಲೀಟರ್ ರಕ್ತವನ್ನು ಹೊಂದಿರುತ್ತದೆ. ಒಂದು ಲೀಟರ್ ರಕ್ತದಲ್ಲಿನ ಗ್ಲೂಕೋಸ್ ಖರ್ಚು ಮಾಡಲು  15 ನಿಮಿಷಗಳ ನಡಿಗೆ ತೆಗೆದುಕೊಳ್ಳುತ್ತದೆ.  ಐದು ಲೀಟರ್ ರಕ್ತದಲ್ಲಿನ ಗ್ಲೂಕೋಸ್  ಖರ್ಚಾಗಬೇಕು ಅಂದ್ರೆ ಒಂದೂವರೆ ಗಂಟೆಯಿಂದ ಒಂದು ಗಂಟೆ ಐವತ್ತು ನಿಮಿಷಗಳ ಕಾಲ ನಡೆಯುವುದು ಉತ್ತಮ. ಜಿಮ್ ಮಾಡುವವರು, ಕ್ರೀಡೆ ಆಡುವವರು ಒಂದೂವರೆ ಗಂಟೆ ನಡೆಯುವುದು ಒಳ್ಳೆಯದು.

ಮೊದಲ ದಿನ 90 ನಿಮಿಷಗಳ ಕಾಲ ನಡೆಯುವುದು ಯಾರಿಗಾದರೂ ಕಷ್ಟ. ಆದ್ದರಿಂದ ನೀವು ಸ್ವಲ್ಪ ಸಮಯದವರೆಗೆ ನಡೆಯಲು ಪ್ರಾರಂಭಿಸಬೇಕು ಮತ್ತು ಕ್ರಮೇಣ ಅದನ್ನು ಹೆಚ್ಚಿಸಬೇಕು. ನಂತರ ನೀವು ಅದನ್ನು ರೂಢಿ ಮಾಡಿಕೊಳ್ಳುತ್ತೀರಿ. ವಾಕಿಂಗ್ ಕೊಬ್ಬನ್ನು ಕರಗಿಸುತ್ತದೆ. ತೂಕ ಕಡಿಮೆ ಮಾಡುತ್ತದೆ.  ವಾಕಿಂಗ್ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸುತ್ತದೆ. ಅಧಿಕ ಬಿಪಿ ಸಮಸ್ಯೆ ಬರುವುದಿಲ್ಲ. ನೀವು ಟೈಪ್ 2 ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಸಹ ತೊಡೆದುಹಾಕಬಹುದು.

Share Post