BengaluruPolitics

ಮತದಾರರ ಮಾಹಿತಿಗೆ ಕನ್ನದ ಹಿಂದೆ ದೊಡ್ಡ ಸಂಚಿದೆ; ಡಿ.ಕೆ.ಶಿವಕುಮಾರ್

ಬೆಂಗಳೂರು; ಮತದಾರರ ಮಾಹಿತಿ ಕಳವು ಪ‍್ರಕರಣದ ಹಿಂದೆ ದೊಡ್ಡ ಸಂಚು ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಚುನಾವಣಾ ಆಯೋಗ ಅಥವಾ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಚುನಾವಣಾಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ. ಆದ್ರೆ, ಸಚಿವರು, ಶಾಸಕರಿಲ್ಲದೆ ಈ ಅಕ್ರಮ ನಡೆಯಲು ಸಾಧ್ಯವಿಲ್ಲ. ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಅಕ್ರಮ ನಡೆದಿದ್ದು, ಎಲ್ಲಾ ಕಡೆ ತನಿಖೆ ನಡೆಯಲೇಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ. ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಮರುಪರಿಷ್ಕರಿಸಬೇಕು ಎಂದರು. ಯಾವುದೇ ಮತವನ್ನು ಪಟ್ಟಿಗೆ ಸೇರಿಸುವಾಗ ಅಥವಾ ತೆಗೆಯುವಾಗ ಆಯಾ ವ್ಯಕ್ತಿಯ ಅರ್ಜಿ ಬೇಕು. ಆದ್ರೆ ಇಲ್ಲಿ ಯಾವುದೇ ಕಾನೂನು ಪಾಲಿಸದೇ ಮತದಾರರ ಒಟ್ಟಿಯಿಂದ ಸಾವಿರಾರು ಜನರನ್ನು ಡಿಲೀಟ್‌ ಮಾಡಲಾಗಿದೆ ಎಂದು ಆರೋಪಿಸಿದರು.

ಸಚಿವರೊಬ್ಬರು ಪ್ರಕರಣ ಬೆಳಕಿಗೆ ಬಂದಾಗ, ನನನೂ ಚಿಲುಮೆ ಸಂಸ್ಥೆಗೂ ಸಂಬಂಧವೇ ಇಲ್ಲ ಎಂದಿದ್ದರು. ನಂತರ ಮಾತು ಬದಲಿಸಿ ಸಂಸ್ಥೆ ಗೊತ್ತು, ಆದರೆ, ಅದನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದ್ದರು ಎಂದು ಡಿಕೆಶಿ ಆರೋಪಿಸಿದರು.

Share Post