ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ; ವಿಶ್ವ ಆರೋಗ್ಯ ಸಂಸ್ಥೆಯಿಂದ ಬೆಂಗಳೂರಿಗೆ ಪ್ರಶಸ್ತಿ
ನ್ಯೂಯಾರ್ಕ್; ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ ಮಾಡಿ ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಐದು ನಗರಗಳಿಗೆ ಪ್ರಶಸ್ತಿ ನೀಡಿದೆ. ಅದರಲ್ಲಿ ಬೆಂಗಳೂರು ಕೂಡಾ ಸೇರಿರುವುದು ಗರ್ವಪಡುವಂತಹ ವಿಚಾರ.
ನಗರದಲ್ಲಿ ತಂಬಾಕು ನಿಯಂತ್ರ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಆದೇಶಗಳನ್ನು ಮಾಡಿ, ಅದನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತಂದ ಕಾರಣಕ್ಕೆ ಬೆಂಗಳೂರಿಗೆ ಪ್ರಶಸ್ತಿ ಘೋಷಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಜಾಗತಿಕ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಬೆಂಗಳೂರಿಗೆ 1,50,000 ಡಾಲರ್ ಅಂದರೆ 1 ಕೋಟಿ 23 ಲಕ್ಷದ 99 ಸಾವಿರದ 975 ರೂಪಾಯಿ ಬಹುಮಾನವಿರುವ ಪ್ರಶಸ್ತಿ ಸಿಕ್ಕಿದೆ.
ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕಠಿಣ ಕ್ರಮಗಳಿಗಾಗಿ ಅಥೆನ್ಸ್ ನಗರಕ್ಕೂ ಈ ಪ್ರಶಸ್ತಿ ಸಿಕ್ಕಿದೆ.