Bengaluru

HIJAB ROW: ನಾನು ಹಾಗೆ ಹೇಳಿಯೇ ಇಲ್ಲ; ಉಲ್ಟಾ ಹೊಡೆದ ಶಾಸಕ ಜಮೀರ್‌

ಬೆಂಗಳೂರು: ನಿನ್ನೆ ಹುಬ್ಬಳ್ಳಿಯಲ್ಲಿ ಹಿಜಾಬ್‌ ಧರಿಸಿದರೆ ರೇಪ್‌ ಆಗುವುದಿಲ್ಲ ಎಂದು ಶಾಸಕ ಜಮೀರ್‌ ಅಹ್ಮದ್‌ ಹೇಳಿದ್ದರು. ಆದ್ರೆ ಇಂದು ಉಲ್ಟಾ ಹೊಡೆದಿದ್ದಾರೆ. ನಾನು ಆ ರೀತಿ ಹೇಳಿಲ್ಲ. ಹಿಜಾಬ್‌ ಧರಿಸಿದರೆ ಮುಸ್ಲಿಂ ಯುವತಿಯರ ಬ್ಯೂಟಿ ಕಾಣೋದಿಲ್ಲ ಎಂದು ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ

ಶಾಸಕರ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಾಸಕರು ಉಲ್ಟಾ ಹೊಡೆದಿದ್ದಾರೆ. ಹಿಜಾಬ್‌ನಿಂದ ಯುವತಿಯರ ಬ್ಯೂಟಿ ಬೇರೆಯವರಿಗೆ ಕಾಣುವುದಿಲ್ಲ. ಹೀಗಾಗಿ, ಸೇಫ್ಟಿ ಇರುತ್ತದೆ ಎಂದು ಹೇಳಿದ್ದೇನೆ. ನನ್ನ ಈ ಹೇಳಿಕೆಯನ್ನು ತಿರುಚಲಾಗಿದೆ. ಹಿಜಾಬ್‌ ಧರಿಸದಿದ್ದರೆ ರೇಪ್‌ ಆಗುತ್ತದೆ ಎಂದು ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

 

Share Post